ಸುಬ್ರಹ್ಮಣ್ಯ: ನರಸಿಂಹ ಜಯಂತೀ ಕಾರ್ಯಕ್ರಮ

0

ವಿದ್ಯಾಪ್ರಸನ್ನ ತೀರ್ಥ ಶ್ರೀಗಳಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ.

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಸುಬ್ರಹ್ಮಣ್ಯ ಇದರ ಶ್ರೀ ನರಸಿಂಹ ಜಯಂತಿ ಮಹೋತ್ಸವ ಅಂಗವಾಗಿ ಶ್ರೀ ಮದಾನಂದತೀರ್ಥ ತತ್ವದರ್ಶಿನೀ ಸಭಾ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಮೇ.20 ಗೌರವಿಸಲಾಯಿತು.

ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆಯ ವಿದ್ಯಾರ್ಥಿ ನಿಜೇಶ್ ಎಸ್. ಎಸ್.ಎಲ್‌.ಸಿ ಯಲ್ಲಿ 582ಅಂಕ,
ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ವರ್ಷ ಬೇಕಲ್ 619ಅಂಕಗಳು,,
ಎಸ್. ಎಸ್. ಪಿ. ಯು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ನಮ್ರತಾ 581 ಅಂಕ,
ಕುಮಾರಸ್ವಾಮಿ ವಿದ್ಯಾಲಯದ  ಪಿ. ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ. ಎಸ್.594 ಅಂಕ ಈ ಪ್ರತಿಭೆಗಳ  ಸನ್ಮಾನ ಕಾರ್ಯ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಒಳ್ಳೆಯ ಪರಿಶ್ರಮಪಟ್ಟು ವಿದ್ಯಾರ್ಜನೆ ಮಾಡಿದ್ದಾರೆ.
ಮಕ್ಕಳ ಮುಂದಿನ ಉನ್ನತ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಬರಲಿ ಎಂದು ಆಶೀರ್ವದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ :

ಶ್ರೀ ಮದಾನಂದತೀರ್ಥ ತತ್ವದರ್ಶಿನೀ ಸಭಾ ವೇದಿಕೆಯಲ್ಲಿ ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ )ಪುತ್ತೂರು ಪ್ರಸ್ತುತಪಡಿಸುವ, ನೃತ್ಯ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶಸಿರುವ ನೃತ್ಯೋಹಂ ಎಂಬ ಭರತನಾಟ್ಯ ಕಾರ್ಯಕ್ರಮವನ್ನು ನೃತ್ಯ ವಿದ್ಯಾರ್ಥಿಗಳು ನಡೆಸಿಕೊಟ್ಟರು.