ಗೀತಾ ಗುಡ್ಡೆಮನೆಯವರಿಗೆ ದೈಹಿಕ ಶಿಕ್ಷಣದಲ್ಲಿ ಡಾಕ್ಟರೇಟ್

0

ಸುಳ್ಯದ ಕಂದಡ್ಕದವರಾಗಿದ್ದು ಪ್ರಸ್ತುತ ಮೈಸೂರು ವಿಶ್ವ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕರಾಗಿರುವ ಗೀತಾ ಗುಡ್ಡೆಮನೆಯವರು ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಡಾ. ಸಿ. ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಅವರು ಸಿದ್ಧಪಡಿಸಿದ Perfomence Of female kabaddi players in relation of selected psychological and psychomotor variables ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ದೊರೆತಿದೆ.

ಕಂದಡ್ಕದ ಆನಂದ ಮತ್ತು ಜಯ ದಂಪತಿಯ ಪುತ್ರಿಯಾಗಿರುವ ಗೀತಾ ಆವರು ರಾಷ್ಟ್ರೀಯ ಕ್ರೀಡಾಪಟುವಾಗಿದ್ದು , ಮಂಗಳೂರು , ಮೈಸೂರು ವಿಶ್ವವಿದ್ಯಾನಿಲಯ ವನ್ನು ಪ್ರತಿನಿಧಿಸಿದ್ದರು .


ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.