ಕೊಯನಾಡು ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ವತಿಯಿಂದ SBS ವಿಧ್ಯಾರ್ಥಿಗಳಿಗೆ ಸಂಚಾರಿ ನಿಯಮ ಪಾಲನಾ ಶಿಬಿರ ಹಾಗೂ SBS ಸಾಹಿತ್ಯ ಸಮಾಜ ಕಾರ್ಯಕ್ರಮ

0

ಕೊಯನಾಡು ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ವತಿಯಿಂದ SBS ವಿಧ್ಯಾರ್ಥಿಗಳಿಗೆ ಸಂಚಾರಿ ನಿಯಮ ಪಾಲನಾ ಶಿಬಿರ ಹಾಗೂ SBS ಸಾಹಿತ್ಯ ಸಮಾಜದ ಕಾರ್ಯಕ್ರಮವು ಸುಬುಲು ಸ್ಸಲಾಂ ಮದ್ರಸ ಸಭಾಂಗಣದಲ್ಲಿ SBS ಅಧ್ಯಕ್ಷರಾದ ರಝಿನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು,

SBS ಉಪಾಧ್ಯಕ್ಷ ಶಾಹಿದ್ ಎಲ್ಲರನ್ನೂ ಸ್ವಾಗತಿಸಿದರು, ಸದರ್ ಮುಅಲ್ಲಿಮ್ ನೌಶದ್ ಫಾಳಿಲಿ ದುಆ ನಡೆಸಿದರು, ಖತೀಬ್ ಉಸ್ತಾದ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ವಿದ್ಯಾರ್ಥಿಗಳಿಗೆ SBS ಹಾಗೂ ಸಂಚಾರಿ ನಿಯಮದ ಬಗ್ಗೆ ಸಂಪೂರ್ಣವಾಗಿ ಸುಸೂತ್ರವಾಗಿ ವಿವರಿಸಿದರು, ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ನಝೀರ್ ಮಾಡಶೇರಿ ವಿದ್ಯಾರ್ಥಿಗಳಿಗೆ ಸಂಚಾರಿ ಪಾಲನಾ ನಿಯಮದ ಬಗ್ಗೆ ಮನ ಮುಟ್ಟುವ ರೀತಿಯಲ್ಲಿ ವಿಷಯ ಮಂಡನೆ ಮಾಡಿದರು, ವೇದಿಕೆಯಲ್ಲಿ NIA ಸದಸ್ಯ ರುನೈಝ್ ಉಪಸ್ಥಿತರಿದ್ದರು ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸುವ ಮೂಲಕ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.