ಲಕ್ಷ್ಮೀ ಕೆ. ಪರಿವಾರಕಾನ ನಿಧನ

0

ಸುಳ್ಯ ಕಸಬ ಪರಿವಾರಕಾನದ ಬಿ.ಎಸ್.ಎನ್.ಎಲ್ ನಿವೃತ್ತ ಜೆ.ಇ ದಿ. ಕೆ. ಬಾಳಪ್ಪ ನಾಯ್ಕರ ಪತ್ನಿ ಶ್ರೀಮತಿ ಲಕ್ಷ್ಮೀಯವರು ಜೂ 10ರಂದು ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಬೆಂಗಳೂರಿನಲ್ಲಿ ಮಹೀಂದ್ರಾ & ಮಹೀಂದ್ರಾ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜಯಂತ್ ನಾಯ್ಕ್, ಸುಳ್ಯ ಮಾಂಡೋವಿ ಮೋಟಾರ್ಸ್ ನಲ್ಲಿ ಮೆಕ್ಯಾನಿಕ್ ಆಗಿರುವ ಬಿ. ಹೇಮಂತ್ ನಾಯ್ಕ್, ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.