ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತನ್ವಿ ಚಿಕ್ಮುಳಿಗೆ 4ನೇ ಸ್ಥಾನ

0

ಬೆಂಗಳೂರುನಲ್ಲಿ ನಡೆದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ತನ್ವಿ ಚಿಕ್ಮುಳಿಗೆ 4 ನೇ ಸ್ಥಾನ ಪಡೆದಿದ್ದಾರೆ.

ಜು.7 ರಂದು ಬೆಂಗಳೂರಿನಲ್ಲಿ ಪತಂಜಲಿ ಯೋಗ ಕೇಂದ್ರ ( ರಿ.) ಬೆಂಗಳೂರು ಇವರು ನಡೆಸಿದ ಅಂತರ್ ಶಾಲಾ ಮತ್ತು ಕಾಲೇಜು ಹಾಗೂ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಪಂಜ ವಿದ್ಯಾರ್ಥಿ ಬಾಲಕಿಯರ ವಿಭಾಗದಲ್ಲಿ ತನ್ವಿ ಚಿಕ್ಮುಳಿಗೆ 4 ನೇ ಸ್ಥಾನ ಪಡೆದಿದ್ದಾಳೆ.

ಈಕೆ ಗುತ್ತಿಗಾರು ಗ್ರಾಮದ ಚಿಕ್ಮುಳಿ ಗೋಪಾಲಕೃಷ್ಣ ಮತ್ತು ಕಾವ್ಯ ದಂಪತಿಗಳ ಪುತ್ರಿ. ಇವರು ಯೋಗ ಶಿಕ್ಷಕ ಶರತ್ ಮಾರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.