ಅರಂತೋಡು: ಬಿಳಿಯಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಕಾರು ಢಿಕ್ಕಿ – ಜಖಂ

0

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಜಖಂಗೊಂಡ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಜು.13ರಂದು ಅಪರಾಹ್ನ ಸಂಭವಿಸಿದೆ.

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಬಿಳಿಯಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದಿದ್ದು, ಚಾಲಕ ಸೇರಿದಂತೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.