ಸುಳ್ಯದಲ್ಲಿ ಶಾಖೆ ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ ಇದರ 8ನೇ ಶಾಖೆ ಕುಶಾಲನಗರದಲ್ಲಿ ಉದ್ಘಾಟನೆ

0

ಸಮಾಜಮುಖಿ ಸೇವೆಯೊಂದಿಗೆ ಪ್ರಣವ ಎತ್ತರಕ್ಕೆ ಬೆಳೆದಿದೆ : ಒಡಿಯೂರು ಸ್ವಾಮೀಜಿ

ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸುಳ್ಯದಲ್ಲಿ ಶಾಖೆಯನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ ಇದರ 8ನೇ ಶಾಖೆ ಉದ್ಘಾಟನಾ ಸಮಾರಂಭವು ಜು. 12 ರಂದು ಕುಶಾಲನಗರದ ಬಿ.ಎಂ. ರಸ್ತೆಯಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಕಟ್ಟಡದ ಪ್ರಥಮ ಮಹಡಿಯಲ್ಲಿ ನಡೆಯಿತು.

ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನಮ್‌ನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ” ಪ್ರಣವ ಸೊಸೈಟಿಯ ಎಂಟನೇ ಶಾಖೆಯು ಕೌಶಲ್ಯ ಭರಿತ ನಾಡು ಕುಶಾಲನಗರದಲ್ಲಿ ಆರಂಭಗೊಂಡಿದೆ. ಇಲ್ಲಿಯೂ ಬಹಳ ಉತ್ತಮ ರೀತಿಯಲ್ಲಿ ಬೆಳೆಯಬಹುದು. ಇದರ ಸಂಸ್ಥಾಪಕರಾದ ಪ್ರಸಾದ್ ರವರು ತನ್ನ ವ್ಯವಹಾರಿಕ ಜೀವನದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ, ಇವರ ಸಮಾಜಮುಖಿ ಸೇವೆಯೊಂದಿಗೆ ನಡೆಸುವ ಸೊಸೈಟಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯವಸ್ಥೆ ಆರ್ಥಿಕ ಕ್ಷೇತ್ರದ ಬಹು ಮುಖ್ಯ ಅಂಶ. ಉತ್ತಮ ಪ್ರಾಮಾಣಿಕ ಆಡಳಿತದಿಂದ ಪ್ರಣವ ಸಂಸ್ಥೆ ಉನ್ನತಿ ಹೊಂದುತ್ತಿದೆ ” ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಣವ ಸಂಸ್ಥೆಯ ಅಧ್ಯಕ್ಷ ಜಿ.ಆರ್ ಪ್ರಸಾದ್ ರವರು
ಪ್ರಣವದ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು.

ಅತಿಥಿಗಳಾದ ಸಾಮಾಜಿಕ ಕಾರ್ಯಕರ್ತ ಭಾರತೀಶ್ ರವರು ದೇಶದ ಈಗಿನ ವ್ಯವಸ್ಥೆ ಮತ್ತು ನಮ್ಮ ಕರ್ತವ್ಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಧ್ವನಿ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಶ್ವೇತ ಮಡಪ್ಪಾಡಿ ಮಾತನಾಡಿ “ಆರ್ಥಿಕ ಸಂಸ್ಥೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಹಾಯಕ್ಕೆ ನಿಲ್ಲಬೇಕು” ಎಂದರು. ಅತಿಥಿಯಾಗಿ ಆಗಮಿಸಿದ್ದ ನಾಮ್ಗೆಲ್ ರವರು ಸಾಲ ನೀಡುವಾಗಲೇ ತೆಗೆದು ಕೊಳ್ಳಬೇಕಾದ ಜಾಗ್ರತೆ ಬಗ್ಗೆ ವಿವರಿಸಿದರು. ಮೈಸೂರ್, ಮಂಡ್ಯ, ಕೊಡಗು ಜಿಲ್ಲೆಯ ಸೌಹಾರ್ದ ಒಕ್ಕೂಟ ಅಧ್ಯಕ್ಷ ನಾರಾಯಣ ರಾವ್ ರವರು ಶುಭಾಶಂಸನೆಗೈದರು.

ವೇದಿಕೆಯಲ್ಲಿ ಪ್ರಣವದ ಆಡಳಿತ ಮಂಡಳಿ ನಿರ್ದೇಶಕರಾದ ಎ‌.ಸೋಮಪ್ಪ ನಾಯ್ಕ್, ದಯಾಸಾಗರ್ ಪೂಂಜ, ಜಯಲಕ್ಷ್ಮಿ ಚಂದ್ರಹಾಸ್, ಸುಬ್ರಹ್ಮಣ್ಯ ಭಟ್, ರವೀಂದ್ರನಾಥ,ಭಗವಾನ್ ದಾಸ್ ಅಡ್ಯಂತಾಯ,ಪದ್ಮರಾಜ್ ಬಲ್ಲಾಳ್, ಮಮತಾ ರಾವ್, ಕೃಷ್ಣ ಕಾಮತ್, ಕುಶಾಲನಗರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ನವೀನ್, ರಘು ,ನಿಸಾರ್ ಅಹ್ಮದ್, ಲೂಯಿಸ್ ರೋಡ್ರಿಗಸ್, ಸಂಗಮೇಶ್ ,ಶ್ರೀಮತಿ ಅರ್ಚನಾ ರವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಪ್ರಶಾಂತ್ ಪೈ ವಂದಿಸಿದರು. ಸುಳ್ಯ ಶಾಖೆ ವ್ಯವಸ್ಥಾಪಕ ರಂಜಿತ್ ಅಡ್ತಲೆ, ಬಾಲಕೃಷ್ಣ ನಿರೂಪಿಸಿದರು.

ಬೆಳಿಗ್ಗೆ ಗಣಹೋಮ ಮತ್ತು ಲಕ್ಷ್ಮಿಪೂಜೆ ನಡೆದ ಬಳಿಕ ನಟರಾಜ ನೃತ್ಯ ನಿಕೇತನ (ರಿ.), ಕಲ್ಲುಗುಂಡಿ, ಸಂಪಾಜೆ, ದ.ಕ., ಅರಂತೋಡು ಮತ್ತು ಸುಳ್ಯ ಶಾಖೆಯ ಶಿಷ್ಯ ವೃಂದದವರಿಂದ ವಿದುಷಿ ಇಂದುಮತಿ ನಾಗೇಶ್ ಎಕ್ಕೂರು, ಮಂಗಳೂರು ಇವರ ನಿರ್ದೇಶನದಲ್ಲಿ ಜಾನಪದ ನೃತ್ಯ ವೈಭವ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸುಳ್ಯದ ಅನೇಕ ಕಲಾವಿದೆಯರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಕಲಾವಿದೆಯರಿಗೆ ಸ್ವಾಮೀಜಿಗಳು ಹಣ್ಣಿನ ಗಿಡ ನೀಡಿದರು.