ಡಾ.ಕ್ಷಮ್ಯ ಅಡ್ಕಾರ್ ರವರ ಫಿಸಿಯೋಥೆರಪಿ ಕ್ಲಿನಿಕ್ ಸುಳ್ಯದಲ್ಲಿ ಶುಭಾರಂಭ

0

ಸುಳ್ಯ ಅಡ್ಕಾರ್ ಹರಿಪ್ರಕಾಶ್ ರವರ ಪುತ್ರಿ ಡಾ.ಕ್ಷಮ್ಯ ಅಡ್ಕಾರ್ ರವರ ಫಿಸಿಯೋಥೆರಪಿ‌ ಕ್ಲಿನಿಕ್ ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಲ್ಯಾಂಪ್ ಸೊಸೈಟಿ ಕಟ್ಟಡದಲ್ಲಿ ಜು.12 ರಂದು ಶುಭಾರಂಭಗೊಡಿತು.


ಇದರ ಉದ್ಘಾಟನೆಯನ್ನು ಸುಳ್ಯದ ಹಿರಿಯ ವೈದ್ಯರಾದ ಡಾ.ರಘರಾಮ ನೆರವೇರಿಸಿದರು.
ಅರೋಗ್ಯಾಧಿಕಾರಿ ಡಾ.ನಂದಕುಮಾರ್,, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ,ನ್ಯಾಯವಾದಿ ಎಂ ವೆಂಕಪ್ಪ ಗೌಡ,ಎಂ ಬಿ ಫೌಂಡೇಶನ್ ನ ಎಂ ಬಿ ಸದಾಶಿವ, ಡಾ.ಉಮಾಶಂಕರ್ ಬೊರ್ಕರ್,ಪುರುಷೋತ್ತಮ ಗೌಡ ಅಡ್ಕಾರ್,ಗಂಗಾಧರ ಗೌಡ ಅಡ್ಕಾರ್, ಸುಳ್ಯ ಗೌಡ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಅತಿಥಿಗಳಾಗಿ ಬಾಗವಹಿಸಿದರು.


ಹರಿಪ್ರಕಾಶ್ ಅಡ್ಕಾರ್ ಮತ್ತು ಶ್ರೀಮತಿ.ವೀಣಾ ಅಡ್ಕಾರ್ ಕಾರ್ಯಕ್ರಮ ಅಗಮಿಸಿದ ಸರ್ವರನ್ನೂ ಸ್ವಾಗತಿಸಿದರು.
ಚೆನ್ನಕೇಶವ ಗೌಡ ಮಾವಂಜಿ ಧನ್ಯವಾದ ಸಮರ್ಪಣೆ ಮಾಡಿದರು.
ಶ್ರಾವ್ಯ ಅಡ್ಕಾರ್ ಮತ್ತು ಭವಿತ್ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು.