ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಸಂಶೋಧನಾ ಕೇಂದ್ರ ಮತ್ತು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ (ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ್ & ಮೆಷಿನ್ ಲರ್ನಿಂಗ್) ವಿಭಾಗದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ಕೇಂದ್ರ (Research & Development Cell) ಮತ್ತು ಕಂಪ್ಯೂಟರ್ ಸೈನ್ಸ್ (ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ್ & ಮೆಷಿನ್ ಲರ್ನಿಂಗ್) ವಿಭಾಗದ LYNX AI Student CLUB ಇದರ ಸಹಯೋಗದಲ್ಲಿ “Machine Learning Models & Practice”ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರವು ದಿನಾಂಕ ೧೩-೦೭-೨೦೨೪ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿ ಡಾ. ಸುಬ್ರಮಣ್ಯ ಭಟ್, ಅಸೋಸಿಯೇಟ್ ಪ್ರೊಫೆಸರ್, ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ NMAMIT, Nitte ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಡಾ. ಸವಿತಾ ಸಿ.ಕೆ., ಡೀನ್ ರೀಸರ್ಚ್ ಮತ್ತು ವಿಭಾಗ ಮುಖ್ಯಸ್ಥರು CS&E (AI&ML) ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರೊ. ವೆಂಕಟೇಶ್ ಯು.ಸಿ. ರೀಸರ್ಚ್ ಸಂಯೋಜಕರು, ಖ&ಆ ಅeಟಟನ ಮಾರ್ಗಸೂಚಿಯನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ. ಸುರೇಶ ವಿ. ಕಾರ್ಯಾಗಾರದ ಉಪಯುಕ್ತತೆಯ ಬಗ್ಗೆ ಮಾಹಿತಿ ಕೊಟ್ಟರು. ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ. ಶುಭಹಾರೈಸಿದರು. ಐಙಓಘಿLYNX AI Student CLUB ಇದರ ವಿದ್ಯಾರ್ಥಿನಿ ಕೀರ್ತಿಶ್ರೀ ವಂದನಾರ್ಪಣೆ ಮಾಡಿದರು. ತಹಕೌಸರ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು,AI&ML ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ತರಬೇತಿಯನ್ನು ಪಡೆದರು.