ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ : ಮುಖದ ಸೌಂದರ್ಯವರ್ಧಕ ಚಿಕಿತ್ಸಾ ವಿಧಾನದ ಕಾರ್ಯಗಾರ

0

ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ ,ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಮುಖದ ಸೌಂದರ್ಯವರ್ಧಕ ಚಿಕಿತ್ಸಾ ವಿಧಾನದ ಕಾರ್ಯಗಾರವನ್ನು ಕೆವಿಜಿ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜುಲೈ 12 ರಂದು ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಸೌಂದರ್ಯವರ್ಧಕ ಚಿಕಿತ್ಸೆಗಳಾದ Microdermabrasion, Micropigmentation, Depigmentation, Microblading, Botox, Fillers, PRP, Lasers, Chemical peeling ಇತ್ಸಾದಿ ವಿಧಾನಗಳ ಬಗ್ಗೆ ಪ್ರಾತ್ಸಕ್ಷೆತೆಯ ಮೂಲಕ ಕಾರ್ಯಗಾರ ನಡೆಸಲಾಯಿತು.


ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಮತ್ತು ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮನುಪ್ರಸಾದ್ ಮೈಸೂರು ರವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರ ನಡೆಸಿಕೊಟ್ಟರು.
ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ| ಪ್ರಸನ್ನ ಕುಮಾರ್ ಡಿ ಯವರು ಪ್ರಸ್ತಾವಿಕರಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಪ್ರಾಧ್ಯಾಪಕ ಡಾ| ಮಹಬಲೇಶ್ವರ ಸಿ.ಹೆಚ್. ಸಂಪನ್ಮೂಲ ವ್ಯಕ್ತಿಯನ್ನು ಎಲ್ಲರಿಗೂ ಪರಿಚಯಿಸಿದರು. ಡಾ| ಸಂದೀಪ್ ಉಪಸ್ಥಿತರಿದ್ದರು. ಡಾ| ರಚನಾ ಪಿ.ಬಿ. ಎಲ್ಲರಿಗೂ ವಂದಿಸಿದರು.
ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಗೃಹದಂತ ವೈದ್ಯರು ಸೇರಿದಂತೆ ೧೫೦ಕ್ಕೂ ಮಿಕ್ಕಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.