ರೋ. ಪಿ ವಿ ಸುಬ್ರಮಣಿ ಕಲ್ಲುಗುಂಡಿ ರೋಟರಾಕ್ಟ್ ಕ್ಲಬ್ ಪುತ್ತೂರಿನ ನೂತನ ಅಧ್ಯಕ್ಷರಾಗಿ ಆಯ್ಕೆ

0

ರೋಟರಾಕ್ಟ್ ಕ್ಲಬ್ ಪುತ್ತೂರಿನ ಇದರ ನೂತನ ಅಧ್ಯಕ್ಷರಾಗಿ ರೋ. ಪಿ ವಿ.ಸುಬ್ರಮಣಿ ಕಲ್ಲುಗುಂಡಿ ಆಯ್ಕೆಯಾಗಿದ್ದಾರೆ.

ವಿಶೇಷ ಚೇತನರ ಅಭಿವೃದ್ಧಿ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಇವರಿಗೆ ರೋಟರಾಕ್ಟ್ ಜಿಲ್ಲಾ ಸಮಿತಿ ನಿರಂತರವಾಗಿ ಜಿಲ್ಲಾ ನಿರ್ದೇಶಕ ಹುದ್ದೆಯನ್ನು ನೀಡುತ್ತಿದ್ದು, ಈ ಭಾರಿಯೂ ಈಗಾಗಲೇ ಸದ್ರಿ ಹುದ್ದೆಯನ್ನು ಇವರಿಗೆ ಘೋಷಿಸಿದೆ.
ಸಂಪಾಜೆ ಗ್ರಾಮದವರಾಗಿದ್ದು ಪುತ್ತೂರಿನಲ್ಲಿ ನೆಲೆಸಿರುವ ಇವರು ಸುಳ್ಯ ತಾಲ್ಲೂಕು ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾಗಿದ್ದಾರೆ.
ಜಿಲ್ಲಾ ಯುವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಲಭಿಸಿದೆ.

ಕಳೆದ 13 ವರ್ಷಗಳಿಂದ ಸುಳ್ಯ , ಮಂಗಳೂರು ಸಿಟಿ, ರೋಟರಾಕ್ಟ್ ಕ್ಲಬ್ ನಲ್ಲಿ ಸದಸ್ಯನಾಗಿ, ಕ್ಲಬ್
ಕಾರ್ಯದರ್ಶಿಯಾಗಿ, ವಲಯ ಸಮಿತಿ ಸದಸ್ಯನಾಗಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ,
ಸೇವೆ ಸಲ್ಲಿಸಿ, ಪ್ರತಿಷ್ಠಿತ ಪುತ್ತೂರು ರೋಟರಾಕ್ಟ್ ಕ್ಲಬ್ ನ ಸದಸ್ಯನಾಗಿ ಸೇರಿ ವಿವಿಧ
ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಇವರನ್ನು 2024-25 ನೇ ಸಾಲಿಗೆ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಜು. 19ರಂದು ಪುತ್ತೂರಿನಲ್ಲಿ ಪದ ಪ್ರಧಾನ ಸಮಾರಂಭ ನಡೆಯಲಿದೆ.