ಜು.18 : ಸುಳ್ಯದಲ್ಲಿ ನವೀಕೃತ ಮೊಬೈಲ್ ಗ್ಯಾರೇಜ್ ಶೋ ರೂಮ್ ಉದ್ಘಾಟನೆ

0

ಶುಭಾರಂಭದ ಪ್ರಯುಕ್ತ ಮೆಗಾ ಇಎಂಐ ಫೆಸ್ಟ್ ,ಪ್ರತೀ ಖರೀದಿಗೆ ಲಕ್ಕಿ ಕೂಪನ್

ಸುಳ್ಯದ ಮುಖ್ಯ ರಸ್ತೆ ಬಾಳೆಮಕ್ಕಿಯಲ್ಲಿ ಪ್ರತಿಷ್ಠಿತ ಮೊಬೈಲ್ ಶೋರೂಮ್ ‘ಮೊಬೈಲ್ ಗ್ಯಾರೇಜ್’ನ ನವೀಕೃತ ಶೋರೂಮ್‌ನ ಉದ್ಘಾಟನೆ ಜು.18ರಂದು ಪೂ.10.30ಕ್ಕೆ ನಡೆಯಲಿದೆ. ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಂಡಿರುವ ವಿಶಾಲವಾದ ಶೋರೂಮ್‌ನಲ್ಲಿ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಸ್ಮಾರ್ಟ್ ಫೋನ್‌ಗಳು, ಲ್ಯಾಪ್‌ಟಾಪ್ಸ್.ಎಲ್‌ಇಡಿ ಟಿವಿ, ಯೂಸ್‌ಡ್‌ ಫೋನ್‌ಗಳ ಅಮೋಘ ಸಂಗ್ರಹಗಳೊಂದಿಗೆ ಮೊಬೈಲ್ ಗ್ಯಾರೇಜ್‌ನ ನವೀಕೃತ ಬಿಗ್ ಶೋರೂಂನ ಉದ್ಘಾಟನೆಗೊಳ್ಳಲಿದೆ.

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಸುಳ್ಯ ಇದರ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ಅವರು ಉದ್ಘಾಟಿಸಲಿದ್ದಾರೆ. ಎಂ.ಬಿ.ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ.ಸದಾಶಿವ, ಡಾ.ರಘುರಾಮ, ವಕೀಲರಾದ ಅಬೂಬಕ್ಕರ್ ಜೆ.ಎನ್, ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಪಿ, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಹಿರಿಯರಾದ ಬಾಪೂ ಸಾಹೇಬ್, ಅಶೋಕ್ ಪ್ರಭು, ದ.ಕ, ಮತ್ತು ಉಡುಪಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಅಧ್ಯಕ್ಷ ಮುನೀ‌ರ್, ಸುಳ್ಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಮೆಗಾ ಫೆಸ್ಟ್…! ಉದ್ಘಾಟನೆಯ ಪ್ರಯುಕ್ತ ಮೆಗಾ ಇಎಂಐ ಫೆಸ್ಟ್.. ಅಸ್ಸಸರೀಸ್‌ಗಳಿಗೆ ಶೇ.50 ತನಕ ಡಿಸ್ಕೌಂಟ್. ಆಗಸ್ಟ್ 20 ರ ತನಕ ಪ್ರತಿ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ ಎಂದು ಮೊಬೈಲ್ ಗ್ಯಾರೇಜ್‌ನ ಮಾಲಕರು ತಿಳಿಸಿದ್ದಾರೆ.


ಅಲ್ಲದೆ ಗ್ರಾಹಕರಿಗಾಗಿ ವಿಶೇಷ ಯೋಜನೆ ಹಮ್ಮಿಕೊಂಡಿದ್ದು ಉದ್ಘಾಟನೆಯ ಪ್ರಮೋ ವೀಡಿಯೋ ಸ್ಟೇಟಸ್ ಹಾಕಿ 50ಕ್ಕೂ ಹೆಚ್ಚು ವೀಕ್ಷಣೆ ಬಂದರೆ 8105100465 ನಂಬರ್‌ಗೆ screenshot ಕಳುಹಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಡ್ರಾ ಮೂಲಕ iPhone 13 ಹಾಗೂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇದೆ.
ಒಟ್ಟಿನಲ್ಲಿ ಆಲ್‌ ಬ್ರಾಂಡ್ಸ್ ಅಂಡರ್ ವನ್ ರೂಫ್.. ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೊಬೈಲ್, ಲ್ಯಾಪ್‌ಟಾಪ್, ಎಲ್‌ಇಡಿ ಟಿವಿಗಳ ಅದ್ಭುತ ಲೋಕ ತೆರೆದುಕೊಳ್ಳಲಿದ್ದು ಡಿಜಿಟಲ್ ಹಬ್ಬಕ್ಕೆ ಸುಳ್ಯ ಸಿದ್ಧಗೊಂಡಿದೆ.