ಕಾವೇರಮ್ಮರವರ ಸಾಹಿತ್ಯ ಬರವಣಿಗೆಯ ಕೊಡುಗೆ ಅಪಾರ : ಎಂ.ಬಿ ಸದಾಶಿವ
ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಹೋಬಳಿ ಘಟಕ ಮತ್ತು ಚೆಂಬು ಸಾಹಿತ್ಯ ವೇದಿಕೆ, ಚೆಂಬು ಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಯಂ. ಜಿ ಕಾವೇರಮ್ಮವರ ಸಾಹಿತ್ಯ ಮತ್ತು ವ್ಯಕ್ತಿತ್ವ ಪರಿಚಯ ಕಾರ್ಯಕ್ರಮವು ಸಂಧ್ಯಾರಶ್ಮಿ ಸಭಾoಗಣದಲ್ಲಿ ಜು.16 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಲೀಲಾ ದಾಮೋದರ ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಡಾ| ಎಸ್.ರಂಗಯ್ಯ ಭಾಗವಹಿಸಿದ್ದರು. ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲರ ಎಂ.ಬಿ ಸದಾಶಿವ ಅವರು ಸಾಹಿತಿ ಎಂ.ಬಿ ಕಾವೇರಮ್ಮ ಅವರ , ವ್ಯಕ್ತಿತ್ವ – ಸಾಧನೆ, ಬರವಣಿಗೆಯ ಕಿರು ಪರಿಚಯವನ್ನು ನೀಡಿದರು. ಸಾಹಿತ್ಯ ಪರಿಚಯವನ್ನು ಬಂಟಮಲೆ ಅಕಾಡೆಮಿ ಅಧ್ಯಕ್ಷ ಎ.ಕೆ ಹಿಮಕರ ನಿರ್ವಹಿಸಿದರು.
ಬಳಿಕ ಸಾಹಿತಿ ಕುಮಾರಸ್ವಾಮಿಯವರು ಇತ್ತೀಚೆಗೆ ನಿಧಾನರಾದ ಸಾಹಿತಿ ನಾಡೋಜಾ ಕಮಲಾ ಹಂಪನಾ, ಪ್ರೊ. ಎನ್. ಜಿ ಪಟು ವರ್ಧನ್, ಅಪರ್ಣ ವಸ್ತರೆ ರವರಿಗೆ ನುಡಿನಮನ ಸಲ್ಲಿಸಿದರು. ಕೆ.ಆರ್ ಗೋಪಾಲಕೃಷ್ಣ ಮತ್ತು ಎಂ.ವಿ ಗಿರಿಜಾ ಅವರಿಂದ ಗಾಯನ ನಡೆಯಿತು. ಬಳಿಕ ಚೆಂಬು ಸಾಹಿತ್ಯ ವೇದಿಕೆ ಆಯೋಜಿಸಿದ ಯಂ. ಜಿ ಕಾವೇರಮ್ಮವರ ರಾಜ್ಯ ಮಟ್ಟದ ಅರೆ ಭಾಷೆ ಕವನ ಸ್ಪರ್ಧೆಯಲ್ಲಿ ವಿಜೇತರಿಗೆ ಪುಸ್ತಕ ಮತ್ತು ಸ್ಮರಣಿಕೆ ವಿತರಣೆ ನಡೆಯಿತು. ವೇದಿಕೆಯಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಕುತ್ಯಾಳ ನಾಗಪ್ಪ ಗೌಡ, ಚೆನ್ನಕೇಶವ ಜಾಲ್ಸೂರು ಉಪಸ್ಥಿತರಿದ್ದರು.
ಈ ವೇಳೆ ಸಾಹಿತಿಗಳಾದ ಪ್ರಭಾಕರ ಶಿಶಿಲ, ಜಯಮ್ಮ ಚೆಟ್ಟಿಮಾಡ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್, ಭೀಮ್ ರಾವ್ ವಾಸ್ಟರ್ , ಸಂಗೀತಾ ರವಿರಾಜ್ ಹೊಸೂರ್, ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿ, ಎಂ.ವಿ ಗಿರಿಜಾ ಪ್ರಾರ್ಥಿಸಿ, ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸದಸ್ಯ ಬಾಬುಗೌಡ ಅಚ್ರಪಾಡಿ ನಿರೂಪಿಸಿ, ಕೇಶವ ವಂದಿಸಿದರು.