ಸಂಪಾಜೆ : ರಾಜಾರಾಂಪುರ ಕಾಲನಿ ಬಳಿ ನಿರ್ಮಾಣವಾದ ಗುಂಡಿ ಮುಚ್ಚುವ ಕಾರ್ಯ

0

ಸಂಪಾಜೆ ಗ್ರಾಮದ ರಾಜರಾಂಪುರ ಕಾಲನಿ ಒಳಗಡೆ ಇರುವ ಮನೆಯ ಬಳಿ ಭಾರೀ ಗಾತ್ರದ ಗುಂಡಿ ನಿರ್ಮಾಣಗೊಂಡು ಗುಂಡಿಯ ಒಳಗಡೆ ದೂರದಿಂದ ಭೂಮಿ ಒಳಗೆ ನೀರು ಹರಿದು ಬರುತ್ತಿರುವ ದೃಶ್ಯ ಕಂಡು ಬಂದಿದ್ದು, ಪಕ್ಕದಲ್ಲಿಯೇ ಮನೆ ಇದ್ದ, ಬಾಳಪ್ಪರವರ ಮನೆ ಅಪಾಯದ ಸ್ಥಿತಿಯಲ್ಲಿತ್ತು. ಇದೀಗ ಪಂಚಾಯತ್‌ನಿಂದ ಹೊಂಡ ಮುಚ್ಚುವ ಕಾರ್ಯ ಆರಂಭಗೊಂಡಿದೆ. ಗ್ರಾ.ಪಂ. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಆಗಮಿಸಿದ್ದು, ಜೆಸಿಬಿ ಮೂಲಕ ಹೊಂಡ ಮುಚ್ಚುವ ಕೆಲಸ ಮಾಡಿದರು.