ಕಾಯರ್ತೋಡಿ: ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0

ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಗುರುಪೀಠಸ್ಥ ಶ್ರೀ ಕಾಲಭೈರವ ದೇವರಿಗೆ ವಿಶೇಷ ಪೂಜೆಯು ಜು.21ರಂದು ನಡೆಯಿತು.

ದೇವರಿಗೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಡಿ‌‌.ಎಸ್. ಗಿರೀಶ್ ಮತ್ತು ಸಹೋದರರು ಮತ್ತು ಮನೆಯವರು ಸೇರಿದಂತೆ ಊರ – ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.