ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕಿನ 2024-25 ನೇ ಸಾಲಿನ ಪಂಜ ವಲಯದ 11 ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ ಮತ್ತು ಅನುದಾನ ವಿತರಣೆ ಕಾರ್ಯಕ್ರಮ ಜು.25 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಂಜ ವಲಯ ಅಧ್ಯಕ್ಷ ಧರ್ಮಪಾಲ ಕಣ್ಕಲ್ ದೀಪ ಬೆಳಗಿಸಿ ಉದ್ಘಾಟಿಸಿದರು.
ದಕ್ಷಿಣ ಕನ್ನಡ -2 ಜಿಲ್ಲಾ ನಿರ್ದೇಶಕರು ಪದಾಧಿಕಾರಿಗಳು ಮಾಹಿತಿ ನೀಡುತ್ತಾ,
ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ದಾರಿ, ಶ್ರೀ ಕ್ಷೇತ್ರದ ಹಿನ್ನೆಲೆ,ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಪರಿಕಲ್ಪನೆ, ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ,ಪ್ರಗತಿ ನಿಧಿಯ ನಿಯಮಾವಳಿಗಳು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸಲ್ಪಡುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಾಲೂಕು ಯೋಜನಾಧಿಕಾರಿಯವರು ಮಾಹಿತಿ ನೀಡಿದರು. ಮತ್ತು ಸುಳ್ಯ ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕಿ ಅನಿತಾ ರವರು ಸ್ವಸಹಾಯ ಸಂಘಗಳ ಲೆಕ್ಕ ಪರಿಶೋಧನೆ,ಪ್ರಗತಿ ನಿಧಿ ಸಾಲಕ್ಕೆ ವಿದಿಸುವ ಬಡ್ಡಿ ದರದ ಕುರಿತು, ಸಮತಲ, ಕಡಿತ ದರ ಬಡ್ಡಿಯ ವ್ಯತ್ಯಾಸ ದ ಬಗ್ಗೆ, ಪ್ರಗತಿ ರಕ್ಷಾ ಕವಚ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಏನೆಕಲ್ಲು ರಾಧಿಕಾ ರೂ.12000,ಕೇನ್ಯದ ವಿಜಯ ಕುಮಾರ್
ರಿಗೆ ರೂ. 4800, ಕೂತ್ಕುಂಜ ಅಡ್ಡತ್ತೋಡು ಪೆರ್ಗಡೆ ಗೌಡರಿಗೆ ರೂಹ40000 ಮೊತ್ತದ ಸಂಪೂರ್ಣ ಸುರಕ್ಷಾ, ಅರೋಗ್ಯ ರಕ್ಷಾ ವಿಮೆ ಮೂಲಕ ಮಂಜೂರಾದ ಚೆಕ್ಕನ್ನೂ ಮತ್ತು ಬಳ್ಪದ ರಾಧಾಕೃಷ್ಣರಿಗೆ ಕ್ರಿಟಿಕಲ್ ಫoಡ್ ಮೂಲಕ ಮಂಜೂರಾದ ರೂ 20000 ಮೌಲ್ಯದ ಮಂಜೂರಾತಿ ಪತ್ರವನ್ನು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ರವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರೋಹಿಣಿ ಸಿ ಎ ಸ್ವಾಗತಿಸಿದರು. ಶ್ರೀಮತಿ ತಾರಾ ಟಿ ವಂದಿಸಿದರು. ಮೇಲ್ವಿಚಾರಕಿ ಶ್ರೀಮತಿ ಕಲಾವತಿ ಪಿ ಬಿ ಯವರು ನಿರೂಪಿಸಿದರು.