ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಇದರ 13ನೇ ವಾರ್ಷಿಕ ಮಹಾಭೆ ಜು.26 ರಂದು ಹಯಾತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಜಾಫರ್ ಸಾಧಿಕ್ ಕುಂಭಕ್ಕೋಡ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸ್ಥಳೀಯ ಜುಮಾ ಮಸೀದಿ ಖತೀಬರು ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಖಾಫಿ ಉಸ್ತಾದರು ದುವಾ ನೆರವೇರಿಸಿದರು.
ನಂತರ ಜಮಾಅತ್ ವ್ಯಾಪ್ತಿಯಲ್ಲಿ ನಿಧನ ಹೊಂದಿದ 7 ಪೋಷಕ ಸದಸ್ಯರುಗಳಿಗೆ ತಹ್ಲೀಲ್ ಸಮರ್ಪಣೆ ಫಾತಿಹ ದುವಾ ನಡೆಯಿತು. ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ ಮುಹಮ್ಮದ್ ಕುಂಞ ಗೂನಡ್ಕ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
2023-2024 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಸಂಘಟನಾ ಕಾರ್ಯದರ್ಶಿ ಟಿ.ಬಿ ಅಬ್ದುಲ್ ಅಝೀಝ್ ಮಂಡಿಸಿದರು.
ಸಂಸ್ಥೆಯ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ವೇದಿಕೆಯಲ್ಲಿ ಸದರ್ ಮುಅಲ್ಲಿಮರಾದ ಅಬ್ದುಲ್ ಸಖಾಫಿ ಸುಳ್ಯ, ಸಲಹಾ ಸಮಿತಿ ಸದಸ್ಯರಾದ ಎ.ಟಿ ಅಶ್ರಫ್,ಅಲ್ ಅಮೀನ್ ಪ್ರಧಾನ ಕಾರ್ಯದರ್ಶಿ ಹಸೈನ್ ಎ.ಟಿ, ಉಪಾಧ್ಯಕ್ಷರಾದ ಮಹಮ್ಮದ್ ಪೆಲ್ತಡ್ಕ ಕೋಶಾಧಿಕಾರಿ ಡಿ ಎಂ ಅಬ್ದುಲ್ಲಾ ಪೆಲ್ತಡ್ಕ, ಕಾರ್ಯದರ್ಶಿ ಅಬ್ದುಲ್ಲಾ ಜಿ.ಎಮ್, ನಿರ್ದೇಶಕರಾದ ಮಿರ್ಷಾದ್ ಚೆರೂರ್, ನೌಷಾದ್ ಕೂಲ್ ಉಪಸ್ಥಿತರಿದ್ದರು.