ಸುಳ್ಯ : ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರೇ ಕೆಟ್ಟು ನಿಂತ ವೋಲ್ವೋ ಬಸ್, ಸಂಚಾರಕ್ಕೆ ಅಡಚಣೆ

0

ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ಭಾಗದಲ್ಲಿ ವೋಲ್ವೋ ಬಸ್ಸು ಒಂದು ಕೆಟ್ಟು ನಿಂತಿದ್ದು ಬೇರೆ ಬಸ್ಸು ಗಳಿಗೆ ಸಂಚರಿಸಲು ಅಡಚಣೆ ಉಂಟಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಈ ಬಸ್ಸು ತಾಂತ್ರಿಕ ದೋಷದಿಂದ ಬಸ್ಸು ನಿಲ್ದಾಣ ಪ್ರವೇಶ ಭಾಗದಲ್ಲಿ ನಿಂತಿದ್ದು ಇತರ ಬಸ್ಸುಗಳಿಗೆ ಓಡಾಡಲು ಆಡಚಣೆ ಉಂಟಾಯಿತು.

ಸಂಬಂಧಪಟ್ಟವರು ಡಿಪೋಗೆ ಮಾಹಿತಿ ನೀಡಿದ್ದು ಹಾಳಾದ ಬಸ್ಸಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.