ಸುಳ್ಯದ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತಿ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮ ಜು.25 ರಂದು ನಡೆಯಿತು. ಕಾರ್ಯಕ್ರಮವನ್ನು ಏ.ಓ.ಜಿ ಎಲ್. ಇ ಕಮಿಟಿ ‘ಬಿ’ ವಿದ್ಯಾಸಂಸ್ಥೆಗಳ ಸಿ.ಇ.ಓ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ ಇ.ಸಿ ಮೆಂಟರ್ ಡಾ. ಉಜ್ವಲ್ ಊರುಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಏ.ಓ.ಎಲ್.ಇ ಕಮಿಟಿ ‘ಬಿ’ ಚಯರ್ ಮನ್ ಡಾ. ರೇಣುಕಾ ಪ್ರಸಾದ್ ಕೆ.ವಿ ರವರ ಅನುಪಸ್ಥಿತಿಯಲ್ಲಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ. ಉಜ್ವಲ್ ಯು.ಜೆ. ಮಾತನಾಡುತ್ತಾ , ಏ.ಓ.ಎಲ್.ಇ ಇದರ ಸ್ಥಾಪಕ ಅಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರ ದೂರದೃಷ್ಟಿತ್ವದ ಫಲವಾಗಿ 1986 ರಲ್ಲಿ ಸ್ಥಾಪಿಸಲ್ಪಟ್ಟ ಕೆ.ವಿ.ಜಿ ಐ ಟಿ ಐ ಕಳೆದ 38 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಯಿತು. ಅಲ್ಲದೆ ಎ.ಓ.ಎಲ್ ಇ (ರಿ) ಕಮಿಟಿ ‘ಬಿ’ ಚಯರ್ ಮನ್ ಡಾ. ರೇಣುಕಾ ಪ್ರಸಾದ್ ಕೆ.ವಿ ರವರು ಈ ಸಂಸ್ಥೆಗೆ ಆಧುನಿಕತೆಯ ಮೆರಗನ್ನು ನೀಡಿ, ನೂತನ ಕಟ್ಟಡ, ಪೀಟೋಪಕರಣ ಹಾಗೂ ಕಲಿಯುವಿಕೆಗೆ ಪೂರಕ ಲ್ಯಾಬ್ ಗಳನ್ನು ನೀಡಿ ರಾಜ್ಯಕ್ಕೆ ಒಂದು ಮಾದರಿ ಸಂಸ್ಥೆಯಾಗಿ ರೂಪಗೊಳ್ಳುವಂತೆ ಮಾಡಿದ್ದಾರೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ನೂರಕ್ಕೆ – ನೂರರಷ್ಟು ಉದ್ಯೋಗದ ಅವಕಾಶವನ್ನು ಪಡೆಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಭವಿಷ್ಯಗಳ ಇನ್ನೂ ಹೆಚ್ಚಿನ ತಂತ್ರಜ್ಞಾನ ಅಭಿವೃದ್ಧಿಯನ್ನು ವಿದ್ಯಾರ್ಥಿಗಳು ಗಮನಿಸಬೇಕು ಮತ್ತು ತಾವು ಕೂಡ ಅದರ ಜೊತೆಗೆ ಸಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆವಿಜಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಶ್ರೀಧರ್ ಎನ್.ಕೆ ಮಾತನಾಡಿ ಯಾವೊಬ್ಬ ವಿದ್ಯಾರ್ಥಿಯು ಕಲಿಯುವಿಕೆಯಲ್ಲಿ ಕೀಳು ಎಂದು ಭಾವಿಸಬಾರದು. ಪ್ರಯತ್ನ ಪಟ್ಟರೆ ತಾವು ಕೂಡ ಕಂಡ ಕನಸು ಹಾಗೂ ಗುರಿಯನ್ನು ತರುವುವುದಕ್ಕೆ ಅಸಾಧ್ಯವೇನಿಲ್ಲ. ಪ್ರಯತ್ನ ಮುಖ್ಯ ಎಂದರು.
1987 ರಿಂದಲೇ ಕೆವಿಜಿ ಐಟಿಐ ಯಲ್ಲಿ ಜವಾನರಾಗಿ ಕಳೆದ 36 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಪುಂಡರೀಕ ಕೆ. ಬಿಳಿಯಾರು ಹಾಗೂ ಅವರ ಪತ್ನಿ ಶ್ರೀಮತಿ ಯಮುನಾ ರನ್ನು ಎ.ಎಲ್.ಓ.ಇ ಕಮಿಟಿ ‘ಬಿ’ ಚಯರ್ ಮೆನ್ ಡಾ. ರೇಣುಕಾ ಪ್ರಸಾದ್ ಕೆ. ವಿ ಮತ್ತು ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ರವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಸಿಇಓ ಡಾ. ಉಜ್ವಲ್ ರವರು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಫಲ ಪುಷ್ಪ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ, ಉಪ ಪ್ರಾಂಶುಪಾಲರಾದ ದಿನೇಶ ಮಡ್ತಿಲ, ಗವರ್ ನಿಂಗ್ ಕೌನ್ಸಿಲ್ ಸದಸ್ಯರುಗಳಾದ ದಯಾನಂದ ಕುರುಂಜಿ, ಪ್ರಸನ್ನ ಕಲ್ಲಜೆ, ಸಂಸ್ಥೆಯ ಮಾಜಿ ಕಚೇರಿ ಅಧ್ಯೀಕ್ಷಕರಾದ ಕರುಣಾಕರ ಮಡ್ತಿಲ ಉಪಸ್ಥಿತರಿದ್ದರು.
ಕಾರ್ಯಕ್ರಮವು ಕಚೇರಿ ಸಿಬ್ಬಂದಿಗಳಾದ ಶ್ರೀಮತಿ ನಳೀನಿ ಹಾಗೂ ಶ್ರೀಮತಿ ಹೇಮಾವತಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಉಪ ಪ್ರಾಂಶುಪಾಲರಾದ ದಿನೇಶ್ ಮಾಡ್ತಿಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲರವರು ಆರ್ಥಿಕ ವರ್ಷದ ವರದಿ ವಾಚನ ಮಾಡುತ್ತಾ ನಿವೃತ್ತ ಸಿಬ್ಬಂದಿಯನ್ನು ಅಭಿನಂದಿಸಿದರು. ಕಲಿಯುವಿಕೆ ಆಟೋಟ ಸ್ಪರ್ಧೆ ಹಾಗೂ ಶೈಕ್ಷಣಿಕ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಅರುಣ್ ಕುಮಾರ್, ಕೆವಿಜಿ ಪಾಲಿಟೆಕ್ನಿಕ್ ಉಪನ್ಯಾಸಕರಾದ ವಸಂತ ಕಿರಿಬಾಗ, ಎ.ಓ.ಎಲ್.ಇ. ಸಿಬ್ಬಂದಿ ಕಮಲಾಕ್ಷ ನಂಗಾರು, ದೈಹಿಕ ಶಿಕ್ಷಕರಾದ ತೀರ್ಥವರ್ಣ, ಭಾಸ್ಕರ ಬೆಳಗದ್ದೆ, ಕೆವಿಜಿ ಐಟಿಐಯ ಕಿರಿಯ ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು. ಸಂದರ್ಭದಲ್ಲಿ 2022-24 ಸಾಲಿನ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಕಾರ್ಯಕ್ರಮ ಕೂಡ ನೆರವೇರಿತು. ಭವಾನಿಶಂಕರ ಅಡ್ತಲೆ ಮತ್ತು ಪ್ರವೀಣ ಕುಮಾರ್ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು.