ಭಾರತೀಯ ಗಡಿ ಭದ್ರತಾ ಪಡೆ( ಬಿ.ಎಸ್.ಎಫ್.) ಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಚೊಕ್ಕಾಡಿ ನಡುಗಲ್ಲು ಮನೆಯ ಬಾಲಕೃಷ್ಣ ಎನ್.ಬಿ.ಯವರು ಜು.31 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
1985ರಲ್ಲಿ ಬಿ.ಎಸ್.ಎಫ್.ಯೋಧರಾಗಿ ಬೆಂಗಳೂರಿನಲ್ಲಿ ಸೇವೆಗೆ ಸೇರಿದ ಬಾಲಕೃಷ್ಣ ರವರು ಭಾರತೀಯ ಗಡಿ, ಜಮ್ಮು ಕಾಶ್ಮೀರ್, ಪಶ್ಚಿಮ ಬಂಗಾಳ, ಶ್ರೀ ನಗರ, ಪಂಜಾಬ್, ಗುಜರಾತ್, ರಾಜಸ್ಥಾನ, ತ್ರಿಪುರ, ಮಿಜೋರಾಂ, ಕೊಲ್ಕತ್ತಾ, ಮಧ್ಯಪ್ರದೇಶ, ಇಂದೋರ್, ಉದಾಮ್ ಪುರ ಮೊದಲಾದ ಕಡೆ ಕರ್ತವ್ಯ ನಿರ್ವಹಿಸದ್ದಾರೆ. ಒಟ್ಟು 39 ವರ್ಷ 2 ತಿಂಗಳು 24 ದಿನ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸಬ್ ಇನ್ ಸ್ಪೆಕ್ಟರ್ ಹುದ್ದೆಯಲ್ಲಿದ್ದು ಜು.31ರಂದು ನಿವೃತ್ತ ರಾಗಲಿದ್ದಾರೆ.
ನಡುಗಲ್ಲು ಬಾಬು ಗೌಡ ಮತ್ತು ಸೀತಮ್ಮ ದಂಪತಿಯ ಪುತ್ರರಾದ ಅವರು ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ, ನಡುಗಲ್ಲಿನಲ್ಲಿ ಪತ್ನಿ ಜಯಮಾಲ, ಮಕ್ಕಳಾದ ಅಶ್ವಿನಿ ಎನ್.ಬಿ.ಮತ್ತು ಅನನ್ಯ ಎನ್.ಬಿ.ಯವರೊಂದಿಗೆ ನೆಲೆಸಿದ್ದಾರೆ.