ಬೆಳ್ಳಾರೆ ಕೆಪಿಎಸ್ ನಲ್ಲಿ ಯಕ್ಷ ಧ್ರುವ-ಯಕ್ಷ ಶಿಕ್ಷಣ ನಾಟ್ಯ ತರಬೇತಿ

0

ಯಕ್ಷ ಧ್ರುವ- ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಕಾರ್ಯಕ್ರಮವನ್ನು ಯುವ ಯಕ್ಷ ಕಲಾವಿದರಾದ ಹೇಮಸ್ವಾತಿ ಕುರಿಯಾಜೆ, ದೇವಿಕಾ ಕುರಿಯಾಜೆ ಮತ್ತು ಶಾಂಭವಿ ದಡ್ಡಲಡ್ಕ ಇವರ ತಂಡದವರಿಂದ ಗಣಪತಿ ಸ್ತುತಿ ಭಾಗವತಿಕೆಯೊಂದಿಗೆ ಉದ್ಘಾಟಿಸಿಸಲಾಯಿತು.ತಾಲೂಕು ಯಕ್ಷ ಶಿಕ್ಷಣ ಘಟಕದ ಗೌರವಾಧ್ಯಕ್ಷ ರಾದ ದಯಾಕರ ಆಳ್ವ ರವರು ದೀಪ ಬೆಳಗಿಸಿ ಶುಭಹಾರೈಸಿದರು.

ಅಧ್ಯಕ್ಷರಾದ ಪ್ರೀತಂ ರೈ ಪ್ರಾಸ್ತಾವಿಕ ನುಡಿಯನ್ನಾಡಿದರು. ಗೌರವ ಸಲಹೆಗಾರರಾದ ರಮೇಶ್ ರೈ ಅಗಲ್ಪಾಢಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾದ ಶ್ರೀನಾಥ್ ರೈ ಬಾಳಿಲ ವಹಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಜನಾರ್ಧನ ಕೆ ಎನ್. ಯಕ್ಷ ಗುರುಗಳಾದ ಬಾಲಕೃಷ್ಣ ಪೆರ್ಲ ಉಪಸ್ಥಿತರಿದ್ದು ಶುಭಹಾರೈಸಿದರು. ಉಪಪ್ರಾಂಶುಪಾಲರಾದ ಉಮಾಕುಮಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. ನೋಡಲ್ ಶಿಕ್ಷಕರಾದ ಪ್ರಭಾವತಿ ಎನ್, ಚಂದ್ರಶೇಖರ ಸಹಕರಿಸಿದರು. ಸಂಸ್ಥೆಯ 60 ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು.