ಶ್ರೀ ಶಾರದಾಂಬ ದಸರಾ -2024

0

ನಾಳೆ ಅ.13: ಮಕ್ಕಳ ದಸರಾ -2024

ಮಕ್ಕಳಿಂದ ದಸರಾ ಮೆರವಣಿಗೆ – ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ವೈವಿಧ್ಯ

ಸುಳ್ಯದಲ್ಲಿ 1972ರಲ್ಲಿ ಸ್ಥಾಪನೆಗೊಂಡ ಶ್ರೀ ಶಾರದಾಂಬ ಸೇವಾ ಸಮಿತಿಯು ಪ್ರಸ್ತುತ ಸುವರ್ಣ ಸಂಭ್ರಮದಲ್ಲಿದ್ದು, ಈ ಬಾರಿ ವಿಶೇಷವಾಗಿ ದಸರಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇದರ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ ಕಾರ್ಯಕ್ರಮದಲ್ಲಿ ಮಕ್ಕಳ ದಸರಾ -2024 ಕಾರ್ಯಕ್ರಮವು ನಾಳೆ ನಡೆಯಲಿದೆ.

ಬೆಳಿಗ್ಗೆ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಲಿದ್ದು, ಬಳಿಕ ಸುಳ್ಯ ಬಸ್ ನಿಲ್ದಾಣದಿಂದ ಹೊರಟು ತಾಲೂಕಿನ ವಿವಿಧೆಡೆಯ ನೂರಾರು ಮಕ್ಕಳ ಮೆರವಣಿಗೆಯು ಶ್ರೀ ಶಾರದಾಂಬ ಕಲಾವೇದಿಕೆಯ ವರೆಗೆ ಸಾಗಿ ಬರಲಿದೆ.
ಬಳಿಕ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಮಕ್ಕಳಿಗೆ ಭಾವಗೀತೆ, ಭಕ್ತಿಗೀತೆ, ಛದ್ಮವೇಷ ಸ್ಪರ್ಧೆ, ಸಮೂಹ ನೃತ್ಯ, ಜನಪದಗೀತೆ, ಭರತನಾಟ್ಯ, ಡ್ರಾಯಿಂಗ್, ಗೂಡುದೀಪ ಸ್ಪರ್ಧೆ ಸೇರಿದಂತೆ ಲಕ್ಕಿಗೇಮ್ ಗಳು ಜರುಗಲಿದೆ‌.
ಸುಳ್ಯ ದಸರಾ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಈ ಬಾರಿ ಮಕ್ಕಳ ದಸರಾ ಹಮ್ಮಿಕೊಳ್ಳಲಾಗಿದ್ದು, ಸುಳ್ಯ ತಾಲೂಕಿನ ವಿವಿಧ ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ.