ಜಾಲ್ಸೂರು: ಚರಂಡಿ ಅವ್ಯವಸ್ಥೆ ಹಿನ್ನೆಲೆ

0

ಜಾಲ್ಸೂರು – ಸೋಣಂಗೇರಿ ರಸ್ತೆಯಲ್ಲೇ ಹರಿಯುತ್ತಿರುವ ಮಳೆನೀರು

ಚರಂಡಿ ಅವ್ಯವಸ್ಥೆ ಹಿನ್ನೆಲೆಯಲ್ಲಿ ಮಳೆನೀರು ಜಾಲ್ಸೂರು – ಸೋಣಂಗೇರಿ ರಸ್ತೆಯಲ್ಲೇ ಹರಿಯುತಿದ್ದು, ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕಾಗಿದೆ.

ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀಗುರು ಸಂಕೀರ್ಣದ ಮುಂಭಾಗದಲ್ಲಿರುವ ಜಾಲ್ಸೂರು – ಸೋಣಂಗೇರಿ ರಸ್ತೆಯಲ್ಲಿ ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ಮಳೆನೀರು ರಸ್ತೆಯಲ್ಲೇ ತುಂಬಿ ಹರಿಯುತ್ತಿದ್ದು, ವಾಹನ ಸವಾರರಿಗೆ, ಸ್ಥಳೀಯ ಅಂಗಡಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ಅಥವಾ ಇಲಾಖೆ ಗಮನಹರಿಸಬೇಕಾಗಿದೆ.