ನೂತನ ಅಧ್ಯಕ್ಷರಾಗಿ ರಾಜೇಶ್ ಅಂಬೆಕಲ್ಲು
ಕಾರ್ಯದರ್ಶಿ: ಮುರಳೀಧರ ಪುನುಕುಟ್ಟಿ
ಸರಕಾರಿ ಪ್ರೌಢಶಾಲೆ ಎಲಿಮಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯು ಜು.28ರಂದು ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅತಿಥಿಗಳಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಧನಂಜಯ ಬಾಳೆತೋಟ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಕೆ. ಭಾಗವಹಿಸಿದ್ದರು. ಸಂಘದ ಸ್ಥಾಪಕಾಧ್ಯಕ್ಷ ಗೋಪಿನಾಥ ಮೆತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಯಂತ ತಳೂರು ಸ್ವಾಗತಿಸಿ, ಶಿಕ್ಷಕರಾದ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳು
ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಕಿರಣ್ ಗುಡ್ಡೆಮನೆ, ಗೌರವ ಕಾರ್ಯದರ್ಶಿಯಾಗಿ ಜಯಂತ ತಳೂರು, ಅಧ್ಯಕ್ಷರಾಗಿ ರಾಜೇಶ್ ಅಂಬೆಕಲ್ಲು, ಉಪಾಧ್ಯಕ್ಷರಾಗಿ ಹರಿಪ್ರಸಾದ್ ನಾರ್ಣಕಜೆ, ಹಾರೀಶ್ ಪಳ್ಳಿಕಲ್, ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ ಪುನುಕುಟ್ಟಿ, ಕಾರ್ಯದರ್ಶಿಯಾಗಿ ಓಂ ಪ್ರಸಾದ್ ಕಜೆ, ಜೀವನ್ ತಳೂರು, ಕೋಶಾಧಿಕಾರಿಯಾಗಿ ಶ್ರೀಮತಿ ಸಂಧ್ಯಾ ಕೆ (ಮುಖ್ಯ ಶಿಕ್ಷಕಿ), ಕ್ರೀಡಾ ಕಾರ್ಯದರ್ಶಿ: ಪ್ರಸನ್ನ ಎಸ್ ಎನ್., ಸಾಂಸ್ಕೃತಿಕ ಕಾರ್ಯದರ್ಶಿ: ದೀಕ್ಷಿತ್ ಚಿತ್ತಡ್ಕ, ಸಾರ್ವಜನಿಕ ಸಂಪರ್ಕಾಧಿಕಾರಿ: ಶಶಿಕಾಂತ್ ಕೊಯಿಂಗೋಡಿ, ನಿಯಾಝ್ ಎಲಿಮಲೆ, ಸಲಹಾ ಸಮಿತಿ: ಗೋಪಿನಾಥ್ ಮೆತ್ತಡ್ಕ, ದಯಾನಂದ ಡಿ ಟಿ, ಕಾರ್ಯಕಾರಿಣಿ ಸಮಿತಿ ಸದಸ್ಯರು: ಹರಿಶ್ಚಂದ್ರ ಕೇಪಳಕಜೆ, ಇಂದಿರೇಶ್ ಗುಡ್ಡೆ, ದಯಾನಂದ ಮೆತ್ತಡ್ಕ, ಕಿರಣ್ ಕರಂಗಿಲಡ್ಕ, ಲೋಹಿತ್ ಮಾವಿನಗೊಡ್ಲು, ಗೋಕಿರಣ ಸುಳ್ಳಿ, ಹರ್ಷಿತ್ ಮಾಡಬಾಕಿಲು, ಉದಯಕುಮಾರ್ ಮೈರ್ಪಳ್ಳ, ದೀಪಕ್ ಕಜೆ, ಶ್ರೀಕಲಾ, ನವ್ಯ ಶ್ರೀ, ವಿಷ್ಣು ಭಟ್ ಮೂಲೆತೋಟ, ಸತೀಶ್ ಗುಡ್ಡೆನ ಮನೆ, ಬಾಲಚಂದ್ರ ಅಂಬೆಕಲ್ಲು, ಸಿದ್ದೀಕ್, ವಿನಯ್ ಕಲ್ಲುಪಣೆ ಆಯ್ಕೆಯಾದರು.