ಅನಂತದೆಡೆಗೆ ಪಯಣಿಸಿದ ಅಜಾತಶತ್ರು ಕಾಟೂರು ಮಾಸ್ತರ್ ಒಂದು ನೆನಪು

0



ಮೊನ್ನೆ ದಿನಾಂಕ ೨೨-೦೭-೨೦೨೪ನೇ ಸೋಮವಾರಜಾಲ್ಸೂರಿನ ಪಾಲಿಗೆ ತುಂಬಲಾರದ ನಷ್ಟದ ದಿನ. ಜಾಲ್ಸೂರಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕಕ್ಷೇತ್ರದ ಪ್ರೇರಣಾದಾಯಿಕೊಂಡಿಯೊಂದು ಕಳಚಿಕೊಂಡು ಅನಂತದೆಡೆಗೆ ಪಯಣಿಸಿದ ದಿನ. ಅದೆಷ್ಟೋ ಮಂದಿಯಜ್ಞಾನದಾಹವನ್ನು ನೀಗಿಸಿದ, ಸಾಮಾಜಿಕ ಬದುಕಿನಲ್ಲೊಂದುಛಾಪು ಮೂಡಿಸಿದ ತೆರೆಮರೆಯ ಸಾಧಕ, ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾರಾಯಣ ಮಾಸ್ತರ್‌ಕಾಟೂರು. ಈ ಭೂಮಿಯ ಕೆಲಸ ಮುಗಿಸಿ ಭಗವಂತನ ಪಾದದಲ್ಲಿ ಲೀನವಾದರೆಂಬುದೆದುಃಖಕರ ಸಂಗತಿ.


ಜಾಲ್ಸೂರುಗ್ರಾಮದ ಮಟ್ಟಿಗೆಅವರೊಬ್ಬ ಶಿಕ್ಷಕರಾಗದೇ ಗ್ರಾಮದ ಸಂರ್ವಾಗೀಣಅಭಿವೃದ್ಧಿಯಚಿಂತನೆಯೊಂದಿಗೆ ಬದುಕಿದವರು. ಶಾಲೆಯೊಂದು ಸಾರ್ವಜನಿಕರ, ಹಳೆ ವಿದ್ಯಾರ್ಥಿಗಳ, ಅಧಿಕಾರಿ ವರ್ಗಗಳ ಸಮನ್ವಯತೆಯಿದ್ದರೆಯಾವರೀತಿ ಪ್ರಗತಿ ಹೊಂದಬಹುದುಎಂಬುದನ್ನು ತೋರಿಸಿಕೊಟ್ಟ ಅಪರೂಪದ ಶಿಕ್ಷಕ.
೧೯೪೭ ಆಗಸ್ಟ್ ೨೪ ರಂದು ಸುಳ್ಯ ತಾಲೂಕುಜಾಲ್ಸೂರುಗ್ರಾಮದಕಾಟೂರುಐತ್ತಪ್ಪಗೌಡ ಮತ್ತು ವೆಂಕಮ್ಮ ದಂಪತಿಗಳ ೨ನೇ ಪುತ್ರನಾಗಿ ಜನಿಸಿದ ಕಾಟೂರು ನಾರಾಯಣ ಮಾಸ್ತರ್‌ದ.ಕ.ಜಿ.ಪ. ಹಿ.ಪ್ರಾ. ಶಾಲೆ ಅಡ್ಕಾರಿನಲ್ಲಿ ಹಿ.ಪ್ರಾ. ಶಿಕ್ಷಣವನ್ನು, ದ.ಕ.ಜಿ.ಪ.ಹಿ.ಪ್ರಾ.ಶಾಲೆ ಸುಳ್ಯದಲ್ಲಿ ಪ್ರೌಢ ಶಿಕ್ಷಣವನ್ನು, ಬೋರ್ಡ್ ಹೈಸ್ಕೂಲ್ ಸುಳ್ಯದಲ್ಲಿ ಮುಗಿಸಿ ನಂತರಕೂಡಿಗೆಯಲ್ಲಿತನ್ನ ಟಿ.ಸಿ.ಹೆಚ್. ತರಬೇತಿಯನ್ನು ಮುಗಿಸಿದರು. ೧೯೭೦ರಲ್ಲಿ ಪುತ್ತೂರುತಾಲೂಕಿನ ಸರಕಾರಿಕಿರಿಯ ಪ್ರಾಥಮಿಕ ಶಾಲೆ ಗೋಳಿತ್ತಡಿಯಲ್ಲಿ ತನ್ನಅಧ್ಯಾಪಕಜೀವನ ಪ್ರಾರಂಭಿಸಿದ ಅವರು ನಂತರ ದ.ಕ.ಜಿ.ಪ.ಹಿ.ಪ್ರಾ. ಶಾಲೆ ಅಡ್ಕಾರು ಮತ್ತು ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕದಿಕಡ್ಕದಲ್ಲಿ ಮುಖ್ಯ ಗುರುಗಳಾಗಿ ತನ್ನ ವೃತ್ತಿಜೀವನ ಮುಂದುವರಿಸಿದರು.ಕದಿಕಡ್ಕ ಶಾಲೆಯಲ್ಲಿ ೨೦ ವರುಷ ಸೇವೆ ಸಲ್ಲಿಸುವ ಸಮಯದಲ್ಲಿ ಶಾಲೆಯ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸಿದವರು. ಆ ಸಮಯದಲ್ಲಿಆಟದ ಮೈದಾನ ವಿಸ್ತ್ತರಣೆ, ಶಾಲಾ ವನ ನಿರ್ಮಾಣ, ಮೂಲಭೂತ ಸೌಲಭ್ಯಗಳ ಜೋಡಣೆಯೊಂದಿಗೆ ಶಾಲೆಯ ಸರ್ವಾಂಗೀಣಅಭಿವೃದ್ಧಿಗೆ ತೊಡಗಿಸಿಕೊಂಡವರು. ಶಾಲಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರ ಕೊರತೆಯಿದ್ದರೂ ಸ್ವತಃದೈಹಿಕ ಶಿಕ್ಷಣದ ತರಬೇತಿ ನೀಡಿಕ್ರೀಡಾ ಪ್ರತಿಭೆಗಳಿಗೆ ವಿಶೇಷ ತರಬೇತಿಯೊಂದಿಗೆಕಬಡ್ಡಿಯಲ್ಲಿಒಂದುಅತ್ಯುತ್ತಮತಂಡವನ್ನುಕಟ್ಟಿದ ಹಿರಿಮೆಕಾಟೂರು ಮಾಸ್ತರದ್ದು.


ಕಾಟೂರು ಮಾಸ್ತರ್ ಕೇವಲ ಶಿಕ್ಷಣಕಷ್ಟೆ ಮೀಸಲಾಗಿರಲಿಲ್ಲ. ಅವರೋರ್ವ ಕಲಾ ಪೋಷಕ, ಸಾಂಸ್ಕೃತಿಕವಾಗಿ ಅನೇಕ ಸಂಘ ಸಂಸ್ಥೆಗಳಿಗೆ ಜೀವತುಂಬಿದವರು.ಜಾಲ್ಸೂರಿನ ಶ್ರೀಗುರು ಯುವಕ ಮಂಡಲ, ಶೃತಿಯುವತಿ ಮಂಡಲ, ಹಿಂದೂ ಕಲಾ ಕೇಸರಿ ಮುಂತಾದ ಸಂಘಟನೆಗಳ ಬೆನ್ನೆಲುಬಾಗಿ ನಿಂತು ಆ ಸಂಘಟನೆಗಳ ಸದಸ್ಯರು ಸಾಂಸ್ಕೃತಿಕವಾಗಿಜಿಲ್ಲಾ ಮತ್ತುರಾಜ್ಯ ಮಟ್ಟದಲ್ಲಿಗುರುತಿಸುವಲ್ಲಿಕಾಟೂರು ಮಾಸ್ತರ ಪಾಲು ದೊಡ್ಡದು. ಅವರುತೋರಿದ ಸಹಾಯ ಮತ್ತು ಮಾರ್ಗದರ್ಶನಇಂದುಎಲ್ಲರೂ ನೆನಪಿಸುವಂತೆ ಮಾಡಿದೆ.
ಧಾರ್ಮಿಕವಾಗಿ ಮಾಸ್ತರುತನ್ನನ್ನುತಾನು ತೊಡಗಿಸಿಕೊಂಡು ಜಾಲ್ಸೂರಿನಯಾವುದೇಧಾರ್ಮಿಕ ಕಾರ್ಯಗಳಿಗೆ ನಿರ್ಮಲ ಮನಸ್ಸಿನಿಂದ ದೇಣಿಗೆ ನೀಡಿಧಾರ್ಮಿಕತೆಗೆ ಜೋಡಿಸಿಕೊಂಡವರು. ಜಾಲ್ಸೂರಿನ ಶ್ರೀಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರ, ಸಾರ್ವಜನಿಕಗಣೇಶೋತ್ಸವ ಮತ್ತುಇನ್ನಿತರಧಾರ್ಮಿಕ ಕಾರ್ಯಕ್ರಮಗಳಿಗೆ ತನ್ನ ಸಹಾಯಧನದೊಂದಿಗೆಅದರ ನಿರಂತರತೆಗೆ ಸಾಕ್ಷಿಯಾದವರುಕಾಟೂರು ಮಾಸ್ತರ್.
ಸುಮಾರು ೧೯೯೭ರ ಸಮಯದಲ್ಲಿಕದಿಕಡ್ಕ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ, ಲೇಖನಿ ಸಾಮಾಗ್ರಿ, ಕೊಡೆ, ಶಾಲಾ ಬ್ಯಾಗ್ ಮುಂತಾದ ಶೈಕ್ಷಣಿಕ ಸಾಮಾಗ್ರಿಗಳನ್ನು ಸ್ವಂತಖರ್ಚಿನಿಂದ ನೀಡಿಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಮಹಾನ್ ವ್ಯಕ್ತಿಕಾಟೂರು ಮಾಸ್ತರ್.ಅವರುಅಂದು ಮಾಡಿದ ಸಹಾಯದ ಫಲವೇ ಅನೇಕ ಜನಇಂದುಉನ್ನತ ವಿದ್ಯಾಭ್ಯಾಸದೊಂದಿಗೆಉತ್ತಮಉದ್ಯೋಗ ಪಡೆದುದೇಶ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆಅತಿಶಯೋಕ್ತಿಯಾಗಲಾರದು.
ಸಾಮಾಜಿಕಚಿಂತನೆಯಕಾಟೂರು ಮಾಸ್ತರ್‌ರಾಷ್ಟ್ರಕಾರ್ಯಕ್ಕೂ ಒಗ್ಗಿಸಿಕೊಂಡವರು.ದೇಶಾಭಿಮಾನದ ಅನೇಕ ಕೆಲಸ ಕಾರ್ಯಗಳು ನಡೆದಾಗತಾನೋರ್ವ ಸರಕಾರಿಉದ್ಯೋಗಿಎಂಬುದನ್ನೇ ಮರೆತು ಅನೇಕ ಜನರಿಗೆ ನೆರವಾದವರು.ತನ್ನ ವೈಯಕ್ತಿಕ ಬದುಕಿನಲ್ಲಿತಾನು ನಂಬಿದ ತತ್ಪಗಳೊಂದಿಗೆ ಬದುಕಿದವರು. ಅದೆಷ್ಟೋಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದವರು.ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತನಾಗಬಾರದೆಂಬ ಮಹಾತ್ಪಕಾಂಕ್ಷೆಯಿಂದತನ್ನ ಸ್ವಂತ ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದ ಮಾಸ್ತರ್‌ಅವರುಎಲ್ಲಾ ಅಗತ್ಯತೆಗಳನ್ನು ಪೂರೈಸಿದವರು.ಬಹುಶಃ ಅಸಂಖ್ಯಾ ಶಿಷ್ಯ ವೃಂದವನ್ನು ಹೊಂದಿದ ಮಾಸ್ತರ್ ಈ ಎಲ್ಲಾ ಅರ್ಹತೆಗಳಿಂದಾಗಿಯೇ ೨೦೦೦-೨೦೦೧ನೇ ಸಾಲಿನಲ್ಲಿದ.ಕ.ಜಿಲ್ಲಾ ಮಟ್ಟದಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿಊರಿಗೆ ಮತ್ತು ಶಾಲೆಗೆ ಕೀರ್ತಿತಂದವರು.
ಅದ್ಭುತವಾದಚಿಂತನೆ, ಅದನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ, ಮುನ್ನುಗ್ಗಿ ಹೋಗುವ ಪ್ರವೃತ್ತಿ ಮತ್ತು ನಿರಂತರಕಷ್ಟದಜನರಿಗೆ ಸ್ಪಂದಿಸುವ ಗುಣಕಾಟೂರು ಮಾಸ್ತರವರನ್ನುಗ್ರಾಮದತುಂಬಾ ಚಿರಪರಿಚಿತವಾಗಿಸಿತ್ತು. ತನ್ನ ನಿಷ್ಕಲ್ಮಷ ಮನಸ್ಸಿನಿಂದ ಅವರು ನೀಡಿದ ಸಹಾಯಗಳು ಇಂದುಅವರ ಹೆಸರನ್ನು ಶಾಶ್ವತವಾಗಿಸಿದೆ ಎಂದರೆತಪ್ಪಾಗಲಾರದು. ಬದುಕು ಮತ್ತು ಚಿಂತನೆಗಳಿಗೆ ಒಪ್ಪಿಕೊಂಡ ಮಾಸ್ತರ್‌ಒರ್ವ ಶ್ವೇತ ವಸ್ತ್ರದಾರಿ.ತನ್ನಕರ್ಮ ಭೂಮಿಯಲ್ಲಿದುಡಿದು ಸಂಪತ್ತನ್ನು ಸಮಾಜಕ್ಕೆ ನೀಡುವಲ್ಲಿಧೈರ್ಯತೋರಿದದಾನಿಯಾಗಿ, ಅದೆಷ್ಟೋಜನರಜ್ಞಾನದಾಹ ನೀಗಿದಗುರುವಾಗಿ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕಕ್ಷೇತ್ರದ ಪ್ರೇರಣಾದಾಯಕ ವ್ಯಕ್ತಿಯಾಗಿಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದವರು. ಅವರ ಹೆಜ್ಜೆ ಗುರುತುಗಳೇ ಅವರ ಶಿಷ್ಯ ವರ್ಗಕ್ಕೆದಾರಿದೀಪವಾಗಲಿ.ಅವರ ನಿರ್ಮಲ ಮನಸ್ಸಿನ ಚಿಂತನೆಗಳು ಸರ್ವರ ಬಾಳಿಗೆ ಪ್ರೇರಣೆಯಾಗಲಿ ಮತ್ತು ಮುಂದಿನ ಜನಾಂಗಕ್ಕೆದಾರಿದೀಪವಾಗಲೆಂದು ಬೇಡುತ್ತಾಒಂದು ಶೂನ್ಯವನ್ನು ನಿರ್ಮಿಸಿ, ಅನಂತದೆಡೆಗೆ ಪಯಾಣಿಸಿದ ಅಜಾತಶತ್ರು, ಅಕ್ಷರ ಕಲಿಸಿದ ಗುರುಗಳು, ಸಂಸ್ಕಾರ ಕಲಿಸಿದ ಹಿತೈಷಿಗಳೂ, ಬದುಕುಕಟ್ಟುವಲ್ಲಿ ಪ್ರೇರಣೆಯಾದ ಮಾರ್ಗದರ್ಶಕರೂಆದಕಾಟೂರು ನಾರಾಯಣ ಮಾಸ್ತರಿಗೆ ನನ್ನಅಕ್ಷರ ನಮನ.


ಕಮಲಾಕ್ಷ ನಂಗಾರ್