ವಿದ್ಯಾಭಾರತಿ ಕರ್ನಾಟಕ ದ.ಕ. ಜಿಲ್ಲೆಯ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯು ಜೂ.೩೦ರಂದು ಸರಸ್ವತಿ ವಿದ್ಯಾಲಯ ಕಡಬದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಜಾಲ್ಸೂರಿನ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಿಗೆ ಹಲವು ಪ್ರಶಸ್ತಿಗಳು ಪಡೆದಿದ್ದಾರೆ.
ಕಿಶೋರವರ್ಗದ ಬಾಲಕಿಯರ ವಿಭಾಗದಲ್ಲಿ ೯ನೇ ತರಗತಿಯ ಸಂಧ್ಯಾ ಪಿ. ಪ್ರಥಮ, ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ೮ನೇ ತರಗತಿಯ ಕೃಷ್ಮಾ ಪಿ.ಹೆಚ್. ಪ್ರಥಮ, ೭ನೇ ತರಗತಿಯ ವರ್ಷ ಕೆ.ಜಿ. ದ್ವಿತೀಯ, ೭ನೇ ತರಗತಿಯ ನಿಮಿಷ ಯನ್.ಜೆ. ೪ನೇ ಸ್ಥಾನ ಪಡೆದು ಸರಸ್ವತಿ ವಿದ್ಯಾಲಯ ಸಿದ್ಧಾಪುರ, ಕುಂದಾಪುರದಲ್ಲಿ ನಡೆಯುವ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ವಿನೋಬನಗರ ವಿದ್ಯಾಸಂಸ್ಥೆಯ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.