ವಯನಾಡ್ ದುರಂತದಲ್ಲಿ ಮೃತ ಪಟ್ಟವರಿಗೆ ಅರಂತೋಡು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

0


ವಯನಾಡ್ ಮಂಡಕೈ , ಚೂರಲ್ ಮಲ ಭಾಗದಲ್ಲಿ ಸಂಭವಿಸಿದ ಜಲಸ್ಪೂಟ ದುರಂತದಲ್ಲಿ ಮೃತಟ್ಟವರಿಗೆ ಅರಂತೋಡು ಬದ್ರಿಯಾ ಜುಮಾ ಮಸೀದಿಯಲ್ಲಿ ಆ. 2 ರಂದು ಶುಕ್ರವಾರ ನಮಾಜ್ ಬಳಿಕ ಖತೀಬರಾದ ಬಹು| ಇಸ್ಮಾಯಿಲ್ ಫೈಝಿಯವರ ನೇತ್ರತ್ವದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಜಾತಿ, ಮತ, ಪಕ್ಷ ಬೇದವಿಲ್ಲದೆ ದುರಂತ ಭೂಮಿಯಲ್ಲಿ ರಕ್ಷಣಾ ಕಾರ್ಯಚರಣೆ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಂಘಟನೆಗಳನ್ನು, ಭಾರತೀಯ ಸೇನೆ ಮತ್ತು ಸೇವಾ ಕಾರ್ಯನಿರತರನ್ನು ಅಭಿನಂಧಿಸಿದರು.


ಪ್ರಾರ್ಥನಾ ಸಂಗಮದಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ.ಎಂ ಮೂಸಾನ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಶ್ರಫ್ ಆಲಿ ಮುಸ್ಲಿಯಾರ್, ಸಂಶುದ್ಧೀನ್ ಮುಸ್ಲಿಯಾರ್ ಬಿಳಿಯಾರ್, ಕೆ.ಎಂ ಮೊಯಿದು ಕುಕ್ಕುಂಬಳ, ಹಾಜಿ ಅಬ್ದುಲ್ ಖಾದರ್ ಪಠೇಲ್, ಅಮೀರ್ ಕುಕ್ಕುಂಬಳ, ಎ.ಹನೀಫ್ ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್ ಅರಂತೋಡ್, ಜುಬೈರ್ ಎಸ್.ಇ, ಸಂಶುದ್ಧೀನ್ ಕೆ.ಎ.ಯು, ಹಾಜಿ ಅಝಾರುದ್ಧೀನ್ ತಾಜುದ್ಧೀನ್ ಅರಂತೋಡು, ಎ. ಅಬ್ದುಲ್ ಮಾಸ್ತರ್, ಎ. ಉಮ್ಮರ್, ಆಶಿಕ್ ಕುಕ್ಕುಂಬಳ, ಜವಾದ್ ಪಾರೆಕ್ಕಲ್, ಹಮೀದ್ ಬಿಳಿಯಾರ್, ಅಬ್ದುಲ್ಲ ಗುಂಡಿ, ನವಾಝ್, ಹಾಜಿ ಅಬ್ದುಲ್ ರಝಾಕ್ ಅಡಿಮರಡ್ಕ, ಹಾಜಿ ಹಮೀದ್ ಅಡಿಮರಡ್ಕ, ಮುಸ್ತಫ ಎ.ಇ, ಲತೀಫ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.