ಬಾಳೆಮಕ್ಕಿ ಬಳಿ ಕಾರಿನ ಹಿಂಭಾಗಕ್ಕೆ ಸ್ಕೂಟಿ ಡಿಕ್ಕಿ

0

ಸುಳ್ಯ ಬಾಳೆಮಕ್ಕಿ ಬಳಿ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿಗೆ ಅದರ ಇಂದಿನಿಂದ ಬರುತ್ತಿದ್ದ ಸ್ಕೂಟಿ ಸವಾರ ಗುದ್ದಿದ್ದು ಘಟನೆಯಿಂದ ಎರಡು ವಾಹನಗಳು ಜಖಂ ಗೊಂಡು ಸ್ಕೂಟಿ ಸವರನ್ನು ಕಾಲಿಗೆ ಗಾಯವಾದ ಘಟನೆ ಇದೀಗ ನಡೆದಿದೆ.

ಗಾಂಧಿನಗರ ಕಡೆಯಿಂದ ಬರುತ್ತಿದ್ದ ಕೆ ಎಲ್ ರಿಜಿಸ್ಟ್ರೇಷನ್ ನಂಬರ್ ಹೊಂದಿದ ಕಾರಿಗೆ ಅದರ ಇಂದಿನಿಂದ ಬರುತ್ತಿದ್ದ ಹಳೆಗೇಟಿನ ಅಂಕಿತ್ ಎಂಬ ಯುವಕ ಚಲಾಯಿಸಿ ಕೊಂಡು ಬರುತ್ತಿದ್ದ ಸ್ಕೂಟಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟಿ ಚಾಲಕ ರಸ್ತೆಗೆ ಬಿದ್ದಿದ್ದು ಆತನ ಕಾಲಿಗೆ ಅಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ.


ಘಟನೆಯಿಂದ ಸ್ಕೂಟಿಯ ಮುಂಭಾಗ ಮತ್ತು ಕಾರಿನ ಹಿಂಭಾಗಕ್ಕೆ ಜಕಮ್ ಸಂಭವಿಸಿದೆ.