ಸುಳ್ಯ ಕನ್ನಡ ಭವನದಲ್ಲಿ ಮುಂಗಾರು ಕವಿಗೋಷ್ಢಿ- ವರ್ಷ ವೈಭವ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಸುಳ್ಯ ಹೋಬಳಿ ಘಟಕ ಆಯೋಜನೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಸುಳ್ಯ ಹೋಬಳಿ ಘಟಕದ ಆಶ್ರಯದಲ್ಲಿ ಮುಂಗಾರು ಕವಿಗೋಷ್ಠಿ- ವರ್ಷ ವೈಭವ ಇಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ನೆರವೇರಿಸಿದರು. ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ ಕೆ., ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ನಿವೃತ್ತ ಉಪನ್ಯಾಸಕ ಎ.ಅಬ್ದುಲ್ಲ ಅರಂತೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎನ್ನೆಂಸಿ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂಜೀವ ಕುದ್ಪಾಜೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾದ ಯೋಗೀಶ್ ಹೊಸೊಳಿಕೆ,ಹೇಮಾ ಗಣೇಶ ಕಜೆಗದ್ದೆ,ಸಾನು ಉಬರಡ್ಕ,
ಡಾ.ಅನುರಾಧಾ ಕುರುಂಜಿ,
ಉದಯಭಾಸ್ಕರ ಸುಳ್ಯ ,ಲತಾಶ್ರೀ ಸುಪ್ರೀತ್ ಮೋಂಟಡ್ಕ,
ಮಮತಾ ರವೀಶ್ ಪಡ್ಡಂಬೈಲು,
ಪೂರ್ಣಿಮಾ ಮಡಪ್ಪಾಡಿ,
ವಿಜಯಕುಮಾರ್ ಕಾಣಿಚ್ಚಾರ್,
ವಿಮಲಾರುಣ ಪಡ್ಡಂಬೈಲು,
ವಿನೋದ್ ಮೂಡಗದ್ದೆ,ರೇಷ್ಮಾ ಪೆರುವಾಜೆ ಕವನ ವಾಚನ ಮಾಡಿದರು.


ಗಾಯಕರಾದ ಕೆ.ಆರ್.ಗೋಪಾಲಕೃಷ್ಣ, ಶ್ರೀಮತಿ ಎಂ.ವಿ.ಗಿರಿಜಾ, ಸಂಧ್ಯಾ ಮಂಡೆಕೋಲು ಪ್ರಸಿದ್ಧ ಕವಿಗಳ ಕವಿತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ತೇಜಸ್ವಿ ಕಡಪಳ ಸ್ವಾಗತಿಸಿ, ಶ್ರೀಮತಿ ಚಂದ್ರಮತಿ ಕೆ.ವಂದಿಸಿದರು. ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.