ಅಮರಮುಡ್ನೂರಿನ ಕುಕ್ಕುಜಡ್ಕದ ಪೇಟೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಖಿನ್ನತೆಗೊಳಗಾದ ಅಪರಿಚಿತ ವ್ಯಕ್ತಿಯೊಬ್ಬರನ್ನು ಉಪಚರಿಸಿ ಮನೆ ಸೇರಿಸುವ ಮೂಲಕ ಅಟೋ ಚಾಲಕ ಮಾನವೀಯತೆ ಮೆರೆದಿದ್ದಾರೆ.
ಸುಮಾರು 73 ವರ್ಷ ಪ್ರಾಯದಅಪರಿಚಿತ ವಯೋ ವೃದ್ಧ ವ್ಯಕ್ತಿ ಕಳೆದೆರಡು ದಿನಗಳಿಂದ ಮಾನಸಿಕವಾಗಿ ಕುಕ್ಕುಜಡ್ಕದ ಪೇಟೆಯಲ್ಲಿ ಬಸ್ ನಿಲ್ದಾಣಗಳಲ್ಲಿ ತಿರುಗಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯ ಅಟೋ ಚಾಲಕ ಪುನೀತ್ ಸಂಕೇಸ ರವರು ಹೊಯ್ಸಳ ದವರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೋಲೀಸರ ವ್ಯಕ್ತಿಯ ಪರಿಚಯ ವಿಚಾರಿಸಿದ ಬಳಿಕ ಅವರ ಮಗಳೊಂದಿಗೆ ಮಾತುಕತೆ ದೂರವಾಣಿ ಮೂಲಕ ಸಂಪರ್ಕಿಸಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಪುನೀತ್ ಹಾಗೂ ಸ್ಥಳೀಯರಾದ
ಜಗ್ಗೇಶ ಮತ್ತು ರವಿ ಸಂಕೇಸ ರವರು
ಅವರನ್ನು ಅಟೋದಲ್ಲಿ ಗುತ್ತಿಗಾರಿನಲ್ಲಿರುವ ಮಗಳ ಮನೆಗೆ ಬಿಟ್ಟು ಬರುವಲ್ಲಿ ಸಹಕರಿಸಿದರು.