ಅರೆಭಾಷೆ ಅಕಾಡೆಮಿ ಸದಸ್ಯರಾಗಿ ವಿನೋದ್ ಮೂಡಗದ್ದೆ ನೇಮಕ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೊಡಗಿನ ವಿನೋದ್ ಮೂಡಗದ್ದೆಯವರು ನೇಮಕಗೊಂಡಿದ್ದಾರೆ.

ಅರೆಭಾಷೆ ಅಕಾಡೆಮಿಗೆ ಕೊಡಗು ಭಾಗದಿಂದ ಒಬ್ಬ ಸದಸ್ಯರ ನೇಮಕ ಬಾಕಿಯಾಗಿತ್ತು. ಅದು ಈಗ ಪೂರ್ಣಗೊಂಡಂತಾಗಿದೆ.


ವಿನೋದ್ ಮೂಡಗದ್ದೆಯವರು ಪತ್ರಕರ್ತರಾಗಿ, ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡವರು. ಅರೆಭಾಷೆ ನಾಟಕಗಳನ್ನೂ ರಚಿಸಿದ್ದಾರೆ. ಕವಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿರುವ ಇವರು ಕ್ರೀಡಾಪಟುವಾಗಿದ್ದು, ಕಾರ್ಯಕ್ರಮ ನಿರೂಪಕರಾಗಿ ಜನಪ್ರಿಯರಾಗಿರುವವರು.