ಉಬರಡ್ಕ ಮಿತ್ತೂರು ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಸನ್ಮಾನ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭದಲ್ಲಿ ಪಂಚಾಯತ್ ಪಿ.ಡಿ.ಓ ರವಿಚಂದ್ರ, ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಸದಸ್ಯರಾದ ಪ್ರಶಾಂತ್ ಪಾನತ್ತಿಲ, ಹರೀಶ್ ಉಬರಡ್ಕ, ಶ್ರೀಮತಿ ಭವಾನಿ ಮೂರ್ಜೆ, ಶ್ರೀಮತಿ ಮಮತಾ ಕುದ್ಪಾಜೆ, ಅನಿಲ್ ಬಳ್ಳಡ್ಕ, ಸಂದೀಪ್, ಪಂಚಾಯತ್ ಸಿಬ್ಬಂದಿಗಳು, ಊರವರು ಉಪಸ್ಥಿತರಿದ್ದರು.

ಗ್ರಾಮಪಂಚಾಯತ್ ಕಚೇರಿಗೆ ಸ್ಥಳದಾನ ಮಾಡಿದ ದಿವಂಗತ ಪಿ.ಎನ್ ಭಟ್ ರವರ ಸ್ಮರಣಾರ್ಥ ಅವರ ಪುತ್ರ ಪಿ. ಸದಾಶಿವ ಭಟ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.