ಮಂಡೆಕೋಲು ಜುಮಾ ಮಸ್ಜಿದ್ ‌ಹಾಗೂ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಮಂಡೆಕೋಲು ಮುಹಿಯದ್ದೀನ್ ಜುಮಾ ಮಸ್ಜಿದ್ ಆಡಳಿತ ಕಮಿಟಿ ಆಶ್ರಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ
ಮಸ್ಜಿದ್ ವಠಾರದಲ್ಲಿ ಅಚರಿಸಲಾಯಿತು. ಮಸ್ಜಿದ್ ಖಥೀಬರಾದ ಶಮೀಮ್ ಅರ್ಷದಿ ಯವರು ಪ್ರಾರ್ಥನೆ ನೆರವೇರಿಸಿ ಶುಭಾಶಯಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು, ನಝೀರ್ ಸಾಲೆಕ್ಕರ್,ಆಡಳಿತ ಕಮಿಟಿ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು, ಮದರಸ ವಿದ್ಯಾರ್ಥಿಗಳು, ಪೋಷಕರುಗಳು ಭಾಗವಹಿಸಿದ್ದರು.

ಮದರಸ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಹುಮಾನ ವಿತರಣೆ ನಡೆಯಿತು.