ಸುಳ್ಯ ಸ್ನೇಹ ಶಿಕ್ಷ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

‘ನಮ್ಮ ಹಿರಿಯರು ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನಾವು ಗೌರವದಿಂದ ಉಳಿಸಿಕೊಳ್ಳಬೇಕು. ಅದಕ್ಕಾಗಿ ಸಂವಿಧಾನವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಸಂಸ್ಕೃತಿಯ ಬಗ್ಗೆ ಗೌರವವನ್ನು ಇಟ್ಟುಕೊಳ್ಳಿ. ಸಮಾನತೆ ಮತ್ತು ಸ್ವಾವಲಂಬನೆಯ ಮೌಲ್ಯಗಳೊಂದಿಗೆ ಸರ್ವರನ್ನು ಸಮಭಾವ ಇಟ್ಟುಕೊಂಡರೆ ನಾವೆಲ್ಲರೂ ಶಾಂತಿಯುತ ಜೀವನವನ್ನು ಸಾಗಿಸಬಹುದು.

ಸ್ವಾತಂತ್ರ್ಯ ದಿನಾಚರಣೆಯು ನಮ್ಮಲ್ಲಿ ದೇಶಪ್ರೇಮವನ್ನು ಉಕ್ಕಿಸುವ ಮೂಲಕ ದೇಶದ ಅಭಿವೃದ್ಧಿಯ ಚಿಂತನೆಯನ್ನು ಬೆಳೆಸಿಕೊಳ್ಳೋಣ’ ಎಂಬುದಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಹೇಳಿದರು. ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಕಾರ್ಯದರ್ಶಿ ಡಾ. ವಿದ್ಯಾ ಶಾಂಭವ ಪಾರೆ, ಪರಿಸರತಜ್ಞ ಡಾ.ಅರುಣ್ ಕಶ್ಯಪ್, ಪೋಷಕರು, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸವಿತಾ ವಂದಿಸಿದರು. ಕೊನೆಯಲ್ಲಿ ಮಕ್ಕಳಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು.