ಸಮನ್ವಯ ರಂಗ:10 ಸ್ಥಾನ
ಸಹಕಾರ ರಂಗ:2 ಸ್ಥಾನ
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರ ಆಯ್ಕೆಗೆ ಮತದಾನ ಜ.15 ರಂದು ಮುಂಜಾನೆ ಆರಂಭ ಗೊಂಡು ಸಂಜೆ ಮತ ಎಣಿಕೆ ನಡೆಯಿತು. ಶೇ.95.04 ಮತದಾನವಾಗಿದೆ.
ಉದಯ ಕುಮಾರ್ ಬೆಟ್ಟ ರವರ ನೇತೃತ್ವದ ಸಮನ್ವಯ ರಂಗ ಮತ್ತು ಸಹಕಾರ ರಂಗದ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯಿತು.
ಉದಯ ಕುಮಾರ್ ಬೆಟ್ಟ ರವರ ನೇತೃತ್ವದ ಸಮನ್ವಯ ರಂಗ 10 ಸ್ಥಾನ ಮತ್ತು ಸಹಕಾರ ರಂಗದ 2 ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಪಿ ಉದಯ ಕುಮಾರ್ ಬೆಟ್ಟ ರವರ ನೇತೃತ್ವದಲ್ಲಿ ಸಮನ್ವಯ ರಂಗದ ವತಿಯಿಂದ
ಸಾಮಾನ್ಯ ಸ್ಥಾನದಲ್ಲಿ ಪಿ ಉದಯಕುಮಾರ್ ಬೆಟ್ಟ, ತೃಪ್ತಿ ಯು, ರವಿಕಿರಣ ಎ, ಹರೀಶ್ ಎಂ ಮಾಳಪ್ಪಮಕ್ಕಿ, ಅಶೋಕ್ ಗೋಳ್ತಾಜೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ವಿಶ್ವನಾಥ ಬೊಳಿಯೂರು, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯು ರಾಮ ನಾಯ್ಕ ಉಡುವೆಕೋಡಿ,, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ ಮಹೇಶ್ ಆಕ್ರಿಕಟ್ಟೆ ,ಮಹಿಳಾ ಮೀಸಲು ಸ್ಥಾನಕ್ಕೆ ಮೀನಾಕ್ಷಿ ಬೊಮ್ಮೆಟಿ,ಸುಧಾ ಎಸ್ ಭಟ್ ಮೇಲಿನಮನೆ ವಿಜೇತರು.
ಸಹಕಾರ ರಂಗದ ವತಿಯಿಂದ ಸಾಮಾನ್ಯ ಸ್ಥಾನದಲ್ಲಿ ಎಂ ಬಾಲಕೃಷ್ಣ ಮೂಲೆಮನೆ,
ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನಕ್ಕೆ ಗೋಪಾಲ ಪಿ ಪೆರಿಯಪ್ಪು ವಿಜೇತರು.