ಜಯನಗರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಸನ್ಮಾನ ಮತ್ತು ದತ್ತಿನಿಧಿ ವಿತರಣೆ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ ನೆರವೇರಿಸಿ ಮಾತನಾಡಿದರು.
ಬಳಿಕ ವಿದ್ಯಾರ್ಥಿಗಳಿಂದ ತ್ರಿವರ್ಣ ಧ್ವಜ ಹಿಡಿದು ಜೈ ಘೋಷದೊಂದಿಗೆ ಶಾಲಾ ಮೈದಾನದಲ್ಲಿ ಬೃಹತ್ ಮೆರವಣಿಗೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸ್ಥಳೀಯ ನ ಪಂ ಸದಸ್ಯರಾದ ಬಾಲಕೃಷ್ಣ ಭಟ್ ಕೊಡಂಕೇರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಭಾ ವೇದಿಕೆಯಲ್ಲಿ ಶಾಲಾ ಸಮಿತಿ ವತಿಯಿಂದ ಶಾಲಾ ಅಭಿವೃದ್ಧಿಗೆ ಸಹಕಾರ ನೀಡಿ ಸದಾ ಪ್ರೋತ್ಸಾಹ ನೀಡುತ್ತಿರುವ ದೃಷ್ಟಿ ಚಾರಿಟೇಬಲ್ ಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷ ಹಾಗೂ ನ ಪಂ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ರವರನ್ನು ಹಾಗೂ ಶಾಲೆಯಿಂದ ಇತ್ತೀಚಿಗೆ ಬೇರೆ ಶಾಲೆಗೆ ವರ್ಗಾವಣೆ ಗೊಂಡಿರುವ ಶಿಕ್ಷಕಿ ನಳಿನಾಕ್ಷಿ ಯವರನ್ನು ಸನ್ಮಾನಿಸಲಾಯಿತು. ಈ ವೇಳೆ ಶಿಕ್ಷಕಿ ನಳಿನಾಕ್ಷಿಯವರು ಶಾಲೆಗೆ ದತ್ತಿ ನಿಧಿ ನೀಡಿದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ,ಎಸ್ ಡಿ ಎಂ ಸಿ ಉಪಾಧ್ಯಕ್ಷರು ನಳಿನಿ, ನಿವೃತ್ತ ದೈಹಿಕ ಶಿಕ್ಷಕ ತೀರ್ಥ ರಾಮ ಅಡ್ಕ ಬಳೆ, ಹಾಗೂ ಶಿಕ್ಷಕರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರುಗಳು, ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಶಿಕ್ಷಕರಾದ ಶ್ರೀಮತಿ ಮಮತಾ ಸ್ವಾಗತಿಸಿ ಭಾರತಿ ವಂದಿಸಿದರು.