ಪಂಜ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ವತಿಯಿಂದ ಹಿರಿಯರ ಸಂಸ್ಮರಣೆ ಕಾರ್ಯಕ್ರಮ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ವತಿಯಿಂದ ಸ್ವಾತಂತ್ರ್ಯ ನಂತರ ನಾಡಿನ ಸರ್ವಾಂಗೀಣ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರ ಸಂಸ್ಮರಣೆ ಕಾರ್ಯಕ್ರಮ ವು ಆ.15 ರಂದು ಪಂಜ ಸರಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ‌ ನಡೆಯಿತು.

ಕಾರ್ಯಕ್ರಮದಲ್ಲಿಅವಿಭಜಿತ ಪುತ್ತೂರು ತಾಲೂಕು ಮಾಜಿ ಶಾಸಕ ದಿ| ಕೂಜುಗೋಡು ವೆಂಕಟ್ರಮಣ ಗೌಡ, ಸುಳ್ಯ ತಾಲೂಕು‌ ಬೋರ್ಡು ಇದರ ಮಾಜಿ ಅಧ್ಯಕ್ಷ ದಿ| ಜಾಕೆ ಪರಮೇಶ್ವರ ಗೌಡ, ಹಿರಿಯ ಧುರೀಣರಾದ ದಿ| ಕೇನ್ಯ ಸುಬ್ಬಯ್ಯ ಶೆಟ್ಟಿ , ಸುಳ್ಯ ತಾಲೂಕು ಬೋರ್ಡ್ ಇದರ ಮಾಜಿ ಅಧ್ಯಕ್ಷ ದಿlಮುಂಡೋಡಿ ಬೆಳ್ಯಪ್ಪ ಗೌಡ ಯವರನ್ನು ಸ್ಮರಿಸಲಾಯಿತು.

ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಸಭಾಧ್ಯಕ್ಷತೆ ವಹಿಸಿದ್ದರು.

ಸುಳ್ಯ ತಾಲೂಕು ಕ ಸ ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಉದ್ಘಾಟಿಸಿ ಮಾತನಾಡಿ “ಈ ನಾಡು ,ನುಡಿ, ಮಣ್ಣಿಗಾಗಿ ದುಡಿದವರನ್ನು ಸ್ಮರಿಸುವುದು ಉತ್ತಮ ಕಾರ್ಯಕ್ರಮ. ನಮ್ಮ ಮುಂದಿನ ಬದುಕು ಕಟ್ಟಲು ಅವರು ನಮಗೆ ಪ್ರೇರಣೆ. ಅದು ಪಾರಂಪರಿಕ ಆಗಿ ಬೆಳೆಯಲಿ.”ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ, ಹಿರಿಯ ಸಹಕಾರಿ ಧುರೀಣ ಪಿ ಸಿ ಜಯರಾಮ, ಮುಖ್ಯ ಶಿಕ್ಷಕ ಯಶವಂತ ರೈ, ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ರವರು ಸಂಸ್ಮರಣೆ ಮಾಡಿದರು.

ಸುಳ್ಯ ತಾಲೂಕು ಕ ಸ ಪ ಮಾಜಿ ಅಧ್ಯಕ್ಷ ಮಾಧವ ಗೌಡ ಜಾಕೆ, ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆ ಸಂಚಾಲಕ ಸವಣೂರು ಸೀತಾರಾಮ ರೈ,
ಪ್ರಗತಿ ಪರ ಕೃಷಿಕ ಕೆ ವಿ ಸುಧೀರ್ ಕೂಜುಗೋಡು ಕಟ್ಟೆ ಮನೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಪೂರ್ವಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಭರತ್ ಮುಂಡೋಡಿ, ಕಾಲೇಜು ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ಮುಖ್ಯ ಶಿಕ್ಷಕ ದೇವಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಾಬು ಗೌಡ ಅಚ್ರಪ್ಪಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆ ಹಾಡಿದರು. ಶಿಕ್ಷಕಿ ಲತಾಶ್ರೀ ಮತ್ತು ಉಪನ್ಯಾಸಕ ಉಮೇಶ್ ನಿರೂಪಿಸಿದರು.
ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಕುಶಾಲಪ್ಪ ವಂದಿಸಿದರು.