Home ಇತರ ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು, ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು ವತಿಯಿಂದ ಸಡಗರ ಸಂಭ್ರಮದ...

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು, ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು ವತಿಯಿಂದ ಸಡಗರ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ

0

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು, ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್ ಎ ಧ್ವಜಾರೋಹಣವನ್ನು ನೆರವೇರಿಸಿದರು, ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಸ್ವಾತಂತ್ರ್ಯೋತ್ಸವದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿದರು, ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳು ದೇಶದ ಐಕ್ಯತೆ ಅಖಂಡತೆ ಮತ್ತು ಏಕತೆಗಾಗಿ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಬೋಧಿಸಿದರು, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಂತಹ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಬಹುಮಾನ ವಿತರಣೆ ನಡೆಯಿತು,
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸದರ್ ಮುಅಲ್ಲಿಮ್ ನೌಶದ್ ಫಾಳಿಲಿ, ಸಹಾಯಕ ಅಧ್ಯಾಪಕ ಮುಷ್ತಾಕ್ ಅದನಿ, NIA ಅಧ್ಯಕ್ಷ ನಸೀರ್ ಮಾಡಶೇರಿ,ಜಮಾಅತ್ ಮಾಜಿ ಅಧ್ಯಕ್ಷ ಮೊಯ್ದಿನ್ ಕುಂಞ, ಕಾರ್ಯದರ್ಶಿಯಾದ ಹಸೈನಾರ್ ಅಮೈ, ಉಪಾಧ್ಯಕ್ಷರಾದ ಕುಂಞಲಿ, ಸದಸ್ಯರುಗಳಾದ ಹನೀಫ್ ಎಸ್ ಪಿ,ಹಂಸ,ಆಸಿಫ್ ಚೇಡಾವು, ಮತ್ತು ಜಮಾಅತ್ ಸರ್ವ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಊರಿನವರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking