ರೋಟರಿ ಶಾಲಾ ವಿದ್ಯಾರ್ಥಿಗಳಿಂದ ಆರ್ಟ್ ಟಚ್ ದ ಹಾರ್ಟ್ ಪೇಪರ್ ಕ್ರಾಫ್ಟ್ ಪ್ರದರ್ಶನ

0

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪೇಪರ್ ಕ್ರಾಫ್ಟ್ ಪ್ರದರ್ಶನವು ರೋಟರಿ ಸಂಸ್ಥೆಯಲ್ಲಿ ನಡೆಯಿತು.ರೋಟರಿ ಅಧ್ಯಕ್ಷರು, ಸಂಚಾಲಕರು, ರೋಟರಿ ಸದಸ್ಯರು, ಟ್ರಸ್ಟ್ ಸದಸ್ಯರು, ಇನ್ನರ್ ವೀಲ್ ಅಧ್ಯಕ್ಷ ರು ಮತ್ತು ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು,ಪೋಷಕರು ಪ್ರದರ್ಶನವನ್ನು ವೀಕ್ಷಿಸಿದರು.

ಪ್ರದ‌ರ್ಶನ ದಲ್ಲಿ ತ್ರಿವರ್ಣ ಗಳಿಂದ ಕೂಡಿದ ವಿವಿಧ ಬಗೆಯ ಕಲಾಪ್ರತಿಭೆಗಗಳ ಕೈಚಳಕ ಕಣ್ಮನ ಸೆಳೆಯಿತು .ಪ್ರಾಥಮಿಕ ಶಾಲಾ ಕಲಾ ಶಿಕ್ಷಕ ಪದ್ಮನಾಭ ಕೊಯ್ನಾಡು ಸಹಕರಿಸಿ ಸ್ವಾತಂತ್ರ್ಯ ದಿನಾಚರಣೆಯ ಮೆರುಗನ್ನು ಹೆಚ್ಚಿಸಿದರು.