ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ಕರ್ಲಪ್ಪಾಡಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಮೇನಾಲ ವಿಷ್ಣು ಯುವಕ ಮಂಡಲದ ಅಧ್ಯಕ್ಷರಾದ ರಂಜಿತ್ ರೈ ಮೇನಾಲ ಉಪಸ್ಥಿತಿರಿದ್ದರು.


ಸಭಾಧ್ಯಕ್ಷತೆಯನ್ನು ದಯಾಳನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅರ್ಚಕರಾದ ಯೋಗರಾಜ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ದಿವ್ಯ ಪಡ್ಡಂ ಬೈಲು, ವಿನೋದ್ ಮೇದಿನಡ್ಕ , ಹಿರಿಯರಾದ ಕರುಣಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು
.

ಕು ತನುಶ್ರೀ, ಹರೀ ಬೃಂದ ಪ್ರಾರ್ಥಿಸಿದರು.
ವಿನೋದ್ ಮೇದಿನಡ್ಕ ಸ್ವಾಗತಿಸಿ,
ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯಂ ಧನ್ಯವಾದ ಸಲ್ಲಿಸಿದರು. ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು.

ವಿನೀತ್ ಮೇದಿನಡ್ಕ,ಸರವಣ ಮೇದಿನಡ್ಕ, ಸಂಜಯ್, ಭಾಸ್ಕರ,ಸತ್ಯಶೀಲನ್ ಕಾರ್ಯಕ್ರಮ ಕ್ಕೆಸಹಕರಿಸಿದರು.