








ಸುಳ್ಯ ತಾಲೂಕು ಆಟೋ ರಿಕ್ಷಾಚಾಲಕರ ಸಂಘ ಬಿ ಯಂ ಯಸ್ ಸಂಯೋಜಿತ ಇದರ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಖಾಸಗಿ ಬಸ್ ನಿಲ್ದಾಣದ ರಿಕ್ಷಾ ಪಾರ್ಕಿಂಗ್ ನಲ್ಲಿ ಆ.15 ರಂದು ನಡೆಯಿತು.
ದ್ವಜಾರೋಹಣವನ್ನು ಮಾಜಿ ಸೈನಿಕರಾದ ನವೀನ ಪಿಂಡಿಮನೆಯವರು ನೆರವೇರಿಸಿ ಮಾತನಾಡಿದರು. ಸಮಾರಂಭದಲ್ಲಿ ರಿಕ್ಷಾ ಚಾಲಕರ ಸಂಘದ ಸ್ಥಾಪಕಾದ್ಯಕ್ಷ ಪಿ. ಗೋಪಾಲಕೃಷ್ಣ ಭಟ್, ಕಾನೂನು ಸಲಹೆಗಾರರಾದ ಪಿ ಭಾಸ್ಕರ್ ರಾವ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಮಾಜಿ ಅದ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಬಿ. ಯಂ.ಯಸ್ ಕಾರ್ಮಿಕ ಸಂಘದ ಅಧ್ಯಕ್ಷ ನಾರಾಯಣ, ಕ್ಯಾಂಪ್ಕೋ ದ ಸದಸ್ಯರು ಹಾಗೂ ರಿಕ್ಷಾ ಚಾಲಕರ ಸದಸ್ಯರು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಸ್ವಾಗತಿಸಿ, ಸುರೇಂದ್ರ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಮುಳ್ಯ ಧ್ವಜ ಗೀತೆ ಹಾಡಿದರು. ಚಂದ್ರಶೇಖರ್ ಮರ್ಕಂಜ ವಂದಿಸಿದರು. ಎಲ್ಲರಿಗೂ ಸಿಹಿತಿಂಡಿ ಹಾಗೂ ಪಾನೀಯ ವ್ಯವಸ್ಥೆಯನ್ನು ಶಿವಕೃಪಾದ ವೆಂಕಟೇಷ ಭಟ್ ಮಾಡಿದರು. ನಂತರ ರಿಕ್ಷಾ ಮೆರವಣಿಗೆ ನಡೆಯಿತು.









