ಪೆರಾಜೆ ಯುವ ಮೋರ್ಚಾದ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ

0

ಪೆರಾಜೆ ಯುವ ಮೋರ್ಚಾದ ವತಿಯಿಂದ 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಬೈಕ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬಳಚೇರಿ ಮುಂಭಾಗದಿಂದ ಆರಂಭ ಗೊಂಡು ಪೆರಾಜೆಯ ಮುಖ್ಯರಸ್ತೆಯ ವರೆಗೆ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭ ದಲ್ಲಿ ಮಡಿಕೇರಿ ಭಾ. ಜ. ಪ ಗ್ರಾಮಾಂತರ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಗೂ ಈ ಕಾರ್ಯಕ್ರಮದಲ್ಲಿ ಭಾ. ಜ. ಪ ಶಕ್ತಿ ಕೇಂದ್ರ ಪ್ರಮುಖ್ ಸುಭಾಶ್ಚಂದ್ರ ಬಂಗಾರಕೋಡಿ, ಸಹಪ್ರಮುಕ್ ಉದಯಚಂದ್ರ ಕುಂಬಳಚೇರಿ, ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪೆರಾಜೆ ಕೃಷಿಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷರ ಅಶೋಕ ಪೆರುಮುಂಡ, ಸಹಕಾರಿ ಸಂಘದ ನಿರ್ದೇಶಕರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು

ಪೆರಾಜೆ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಕುಂಬಳಚೇರಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಮಡಿಕೇರಿ ಯುವ ಮೋರ್ಚ ಪ್ರದಾನ ಕಾರ್ಯದರ್ಶಿ ಪ್ರವೀಣ ಮಜಿಕೋಡಿ ಉಪಸ್ಥಿತರಿದ್ದರು.