ಮಂಗಳೂರು ಸಿಟಿ ಪೋಲಿಸ್ ವತಿಯಿಂದ ಸೈಬರ್ ಕ್ರೈಮ್ ಜಾಗೃತಿಯ ಕಿರು ಚಿತ್ರ ಸ್ಪರ್ಧೆ

0

ಚೊಕ್ಕಾಡಿ ಯುವಕರ ತಂಡದ ಕಿರು ಚಿತ್ರಕ್ಕೆ ಅವಾರ್ಡ್

ಮಂಗಳೂರು ಸಿಟಿ ಪೋಲಿಸ್ ಆಯೋಜನೆಯಲ್ಲಿ ಸೈಬರ್ ಕ್ರೈಮ್ ಕಿರು ಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಅಮರಪಡ್ನೂರಿನ ಚೊಕ್ಕಾಡಿ ಯುವಕರ ತಂಡ ನಿರ್ಮಿಸಿದ ಕಿರು ಚಿತ್ರಕ್ಕೆ ಅವಾರ್ಡ್ ಲಭಿಸಿದೆ.

ಆ.15 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಸೈಬರ್ ಕ್ರೈಮ್ ಜಾಗೃತಿಯ ಕಿರು ಚಿತ್ರ 2024 ರ ಸ್ಪರ್ಧೆಯಲ್ಲಿ ಸುಮಾರು 250 ವೀಡಿಯೋಗಳು ಸ್ಪರ್ಧೆಗೆ ಬಂದಿದ್ದು 20 ಚಿತ್ರಗಳ ಪೈಕಿ ಮಿಥುನ್ ಗೌಡ ಚೊಕ್ಕಾಡಿ ನಿರ್ದೇಶಿಸಿದ “ಅವಾರ್ನೆಸ್ ಆಫ್ ಪ್ರೌಡ್ ಮತ್ತು ಸ್ಕ್ಯಾಮ್” ಎಂಬ ಹೆಸರಿನ ಚಿತ್ರವು
ಆಯ್ಕೆಗೊಂಡು ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರದಲ್ಲಿ ಶರಣ್ ಕರ್ಮಾಜೆ, ಮಿಥುನ್ ಗೌಡ, ವಿಜೇತ್ ದೊಡ್ಡಿಹಿತ್ಲು, ಭೋಜಪ್ಪ ಗೌಡ ಕೇನಡ್ಕ, ಗಗನ್ ಪೂಜಾರಿ ಪದವು, ಶ್ರೀಮತಿ ಸ್ವಾತಿ ಪದವು ಕಲಾವಿದರಾಗಿದ್ದರು.