ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಭಕ್ತಿಗಾನ ರಸಮಂಜರಿ

0

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ರಕ್ಷಾ ಬಂಧನ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಭಕ್ತಿಗಾನ ರಸಮಂಜರಿ ಜರುಗಿತು.

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಗಾಯಕ ಎಚ್ ಭೀಮರಾವ್ ವಾಷ್ಠರ್ ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು ಭಕ್ತಿಗಾನ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕ ರಾಜಯೋಗಿನಿ ಬಿ.ಕೆ ಉಮಾದೇವಿ ದಿವ್ಯಸಾನಿಧ್ಯ ವಹಿಸಿ ರಕ್ಷಾ ಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಕುರಿತು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಠಾಣೆಯ ಪೊಲೀಸ್, ಕವಿ ಸತೀಶ್ ಆಹೇರಿ, ನಿರೂಪಕ ರಮೇಶ್ ಮೇದಿನಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಯೋಗ ಪ್ರದರ್ಶನ ಮಾಡಿದ ಬಾಲಕಿ ಗೌರಿತ ಕೆ ಜಿ ಸುಬ್ರಹ್ಮಣ್ಯ ಅವರಿಗೆ ಪ್ರತಿಭಾ ರತ್ನ ಪ್ರಶಸ್ತಿ ಮತ್ತು ಆರಕ್ಷಕರು ಹಾಗೂ ಕವಿಗಳಾದ ಸತೀಶ್ ಆಹೆರಿ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು ಅವರನ್ನು ಸಮ್ಮಾನಿಸಲಾಯಿತು.

ಭಕ್ತಿ ಗಾನ ರಸಮಂಜರಿಯಲ್ಲಿ ಉಪ್ಪಿನಂಗಡಿಯ ಗಿರೀಶ್ ಪೆರಿಯಡ್ಕ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು, ಹರ್ಷಿತ ಹರೀಶ್ ಐವರ್ನಾಡು, ಪುಷ್ಪ ಡಿ ಎಡಮಂಗಲ, ರಾಜೇಂದ್ರ ಕರಿಕೆ, ಶೀಲಾ ಪಡೀಲ್ ಮಂಗಳೂರು, ವಿಜಯಕುಮಾರ್ ಕಾಣಿಚಾರ್, ಭೂಮಿಕ ನೂಜಿ, ಅರುಣ್ ರಾವ್ ಜಾಧವ್, ಸಾಯಿ ಪ್ರಶಾಂತ್ ಕೋಳಿವಾಡ, ಶೋಭಾ ಬೆಳ್ಳಾರೆ, ಲಾವಣ್ಯ ಉಜಿರೆ, ಪೂಜಾಶ್ರೀ ಬಳ್ಳಡ್ಕ, ಮನ್ವಿತ್ ಬಳ್ಳಡ್ಕ, ಭಾಸ್ಕರ ಅಡೂರು, ಹರೀಶ್ ಪಂಜಿಕಲ್ಲು, ಧೃತಿ ಐವರ್ನಾಡು ಇನ್ನಿತರರು ಭಾಗವಹಿಸಿದ್ದರು.

ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕವಿ ವಿಜಯಕುಮಾರ್ ಕಾಣಿಚ್ಚಾರ್ ರವರು ಸ್ವಾಗತಿಸಿದರು. ಅರುಣ್ ಜರಾವ್ ಜಾಧವ್ ವಂದಿಸಿದರು. ಪೆರುಮಾಳ್ ಐವರ್ನಾಡು ಸಹಕರಿಸಿದರು.