ದೊಡ್ಡತೋಟ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ

0

ದೊಡ್ಡತೋಟ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ರೋಟರಿ ಕ್ಲಬ್ ಸುಳ್ಯ ಸಿಟಿಯ ಸಹಯೋಗದಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ
ಬಾಲವಿಕಾಸನ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಶ್ರೀಹರಿಯ, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷರಾದ ಶಿವಪ್ರಸಾದ್ ,ಕಾರ್ಯದರ್ಶಿ ನವೀನ್ಅಳಿಕೆ ,ಮಾಜಿ ಅಧ್ಯಕ್ಷರಾದ ಪ್ರೀತಮ್ ,ಸದಸ್ಯರಾದ ತೇಜ ಪ್ರಸಾದ್,ಪ್ರಾ.ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಲಲಿತ ಹೆಚ್. ಕೆ,ಸಮುದಾಯ ಆರೊಗ್ಯ ಅಧಿಕಾರಿ ಶ್ರೀಮತಿ ಶಿಲ್ಪಾ, ಮತ್ತು ಜೊಹರ ಮತ್ತು ಕಮಲಾಕ್ಷಿ ಆಶಾ ಕಾರ್ಯಕರ್ತೆಯವರು, ಹಾಗೂ
ಪೋಷಕರು, ಅಧ್ಯಕ್ಷರು, ಕಾರ್ಯದರ್ಶಿ ಸ್ತ್ರೀ ಶಕ್ತಿ
ಸದಸ್ಯರು, ಪುಟಾಣಿ ಮಕ್ಕಳು ಕ ಉಪಸ್ಥಿತರಿದ್ದರು.

ಈ ಕಾರ್ಯಕ್ರಮಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ದೊಡ್ಡತೋಟ ಅಂಗನವಾಡಿ ಪುಟಾಣಿ ಗಳಿಗೆ ರೈಟಿಂಗ್ ಟೇಬಲ್ ನ್ನು ಕೊಡುಗೆ ಯಾಗಿ ನೀಡಲಾಯಿತು. ಶ್ರೀಮತಿ ಕವಿತಾ ಸ್ವಾಗತಿಸಿ, ಶ್ರೀಮತಿ ಚಂದ್ರಾವತಿ ವಂದನಾರ್ಪಣೆಗೈದರು. ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕರ್ತೆಯಾದ ಶ್ರೀಮತಿ ರಾಜೇಶ್ವರಿ,ಸಹಾಯಕಿ ಶ್ರೀಮತಿ ಕುಸುಮಾವತಿಯವರು ಸಹಕರಿಸಿದರು.