ಪ್ರಕೃತಿ ದುರಂತಗಳ ಕುರಿತ ಸಂವಾದ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸುಳ್ಯದ ಅಶ್ರಫ್ ಜೀರ್ಮುಖಿಯವರಿಗೆ ಅಹ್ವಾನ

0

ಕಥನ ಕರ್ನಾಟಕ ಬೆಂಗಳೂರು ಪ್ರಕಟಿಸುವ ವಯನಾಡು- “ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು,, ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಪ್ರಯುಕ್ತ ಸಂಘಟಿಸುತ್ತಿರುವ ಭೂಮಿ ಮತ್ತು ಮನುಷ್ಯರು ಸಂವಾದ ಕಾರ್ಯಕ್ರಮಕ್ಕೆ ಸುಳ್ಯದ ಅಶ್ರಫ್ ಜೀರ್ಮುಖಿ ರವರಿಗೆ ಅಹ್ವಾನ ಬಂದಿದೆ.

ಆಶ್ರಫ್ ರವರು ಕಳೆದ ಕೆಲವು ವಾರಗಳ ಹಿಂದೆ ವಯನಾಡ್ ದುರಂತ ಸ್ಥಳಕ್ಕೆ ತೆರಳಿ ಅಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕ್ಕೊಂಡಿದ್ದರು.

ಸುಳ್ಯದಲ್ಲಿ ಉದ್ಯಮಿ ಆಗಿರುವ ಇವರು ಹವ್ಯಾಸೀ ಬರಹಗಾರರಾಗಿದ್ದು ವಯನಾಡು ದುರಂತ ನಡೆದ ಸಮಯದಲ್ಲಿ ಅಲ್ಲಿಗೆ ತೆರಳಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾ ಅಲ್ಲಿನ ಕರುಣಾಜನಕ ಸ್ಥಿತಿಗತಿಗಳನ್ನು ತಮ್ಮ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಲೇಖನ ಮೂಲಕ ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕ್ಕೊಂಡಿದ್ದರು.

ಸುಮಾರು ಹತ್ತಕ್ಕೂ ಹೆಚ್ಚು ವೆಬ್ ಪೋರ್ಟಲ್ಗಳಲ್ಲಿ ಇವರ ಬರಹಗಳು ಪ್ರಕಟಗೊಂಡು ವೈರಲ್ ಆಗಿದ್ದವು.

ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಇವರಿಗೆ ಅಹ್ವಾನ ಬಂದಿರುತ್ತದೆ.