ಕಾಸ್ಪಾಡಿ ಲಿಂಗಪ್ಪ ಗೌಡ ನಿಧನ

0

ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಚಟ್ಟೆಕಲ್ಲು ನಿವಾಸಿ ಕಾಸ್ಪಾಡಿ ಲಿಂಗಪ್ಪ ಗೌಡ ( ಸುಬ್ರಾಯ) ಅವರು ಅಸೌಖ್ಯದಿoದ ಸ್ವಗೃಹದಲ್ಲಿ( ಆ 27 )ರಂದು ಬೆಳಿಗ್ಗೆ ನಿಧನರಾದರು.ಅವರಿಗೆ 85 ವರ್ಷ ವಯಸ್ಸಾಗಿತ್ತು.

ಸಂಪಾಜೆ ಗ್ರಾಮದವರಿಗೆ ಸುಬ್ರಾಯ ಕಾಸ್ಪಾಡಿಯೆಂದೆ ಪರಿಚಿತರಾಗಿದ್ದು, ಕೆಲವು ದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಆರೋಗ್ಯದಲ್ಲಿ ಸ್ಪಂದನೆ ಕಂಡುಬಂದಿದ್ದು, ಮನೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡುತ್ತಿದ್ದರು.ಆದರೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರು ಪತ್ನಿ ರುಕ್ಮಿಣಿ ,ಮೂವರು ಮಕ್ಕಳು , ಮತ್ತು ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.