ಸೆ.7- 8 ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಸೆ.7ರಂದು ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ, ಸೆ.8 ರಂದು ಪುರುಷರ ಮುಕ್ತ ಹಗ್ಗ-ಜಗ್ಗಾಟ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸೆ.7 ರಂದು 21 ನೇ ವರ್ಷದ ಶ್ರೀಗಣೇಶೋತ್ಸವ ನಡೆಯಲಿದೆ.

ಅಂದು ಬೆಳಗ್ಗೆ 9-00 ಗಂಟೆಗೆ ಗಣಪತಿ ಪ್ರತಿಷ್ಠೆ ನಡೆಯಲಿದೆ.
ಬಳಿಕ ಸಾಮೂಹಿಕ ಗಣಪತಿ ಹವನ ಬೆಳಿಗ್ಗೆ ಗಂಟೆ 10-00ರಿಂದ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವುದು ಕಾರ್ಯಕ್ರಮ ಜರುಗಲಿದೆ.

ಅಂದು ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ,
ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಮತ್ತು ಎಲ್. ಕೆ. ಜಿ ಯು. ಕೆ. ಜಿ ಮಕ್ಕಳಿಗೆ, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೀಗೆ ವಿವಿಧ ಸ್ಥರಗಳ ಸ್ಪರ್ಧೆಗಳು ಜರಗಲಿವೆ. ಸಂಜೆ
ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ ಹಾಗೂ
ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ
ಭಜನಾ ಕಾರ್ಯಕ್ರಮ ಜರುಗಲಿದೆ. ಬಳಿಕ
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ನಡೆಯಲಿದೆ.
ರಾತ್ರಿ ಸಭಾ ಕಾರ್ಯಕ್ರಮ,
ಧಾರ್ಮಿಕ ಉಪನ್ಯಾಸ,
“ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ. ಶೋಭಾಯಾತ್ರೆ
ಸೆ.8 ರಂದು ಗಣೇಶನ
ಶೋಭಾಯಾತ್ರೆಯು ಅಪರಾಹ್ನ ನಡೆಯಲಿದೆ.

ಸಾರ್ವಜನಿಕ ಮುಕ್ತ ಕ್ರೀಡಾಕೂಟ

ಸೆ‌.7 ರಂದು ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸೆ.
8 ರಂದು ಪುರುಷರ ಮುಕ್ತ ಹಗ್ಗ-ಜಗ್ಗಾಟ ನಡೆಯಲಿದ್ದು ಬಹುಮಾನವಾಗಿ ನಗದು ಹಾಗೂ ಶಾಶ್ವತ ಫಲಕ ಇರುವುದಾಗಿ ಸಂಘಟಕರು ತಿಳಿಸಿದ್ದಾರೆ.