ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

0

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಿನ್ನೆ ನಡೆದಿದ್ದು, ಇಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ನಡೆಸಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬುದ್ಧ ನಾಯ್ಕ್ ಜಿ. ಯವರು ಮಧ್ಯಾಹ್ನ 1.30 ಕ್ಕೆ ಪದಗ್ರಹಣ ನಡೆಸಿದರೆ, ನೂತನ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ. ನೀರಬಿದಿರೆಯವರು ಅಪರಾಹ್ನ 3.45 ಕ್ಕೆ ಪದಗ್ರಹಣಗೈದರು.


ಈ ಎರಡು ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳು, ನ.ಪಂ.ಸಿಬ್ಬಂದಿ ಗಳು , ಬಿ.ಜೆ.ಪಿ.ಮುಖಂಡರಗಳು ಉಪಸ್ಥಿತರಿದ್ದರು.