ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಪಾನೀಸ್ ಭಾಷಾ ಕಾರ್ಯಾಗಾರ

0

ಆ. 30ರಂದು ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಪಾನೀಸ್ ಭಾಷಾ ಕಾರ್ಯಾಗಾರವು ಕಾಲೇಜಿನ ಆಡಳಿತ ಮಂಡಳಿ ಮತ್ತು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಇವರ ಮಾರ್ಗದರ್ಶನದ ಮೇರೆಗೆ ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಯಿತು.

ಶ್ರೀಮತಿ ಚರಿತಾ ಮಧುಕರ್, ಜಪಾನೀ ಭಾಷೆಯ ಸಲಹೆಗಾರರು ಹಾಗೂ ತರಬೇತುದಾರರು, ಐ.ಐ.ಐ.ಟಿ., ಜಬಲ್‌ಪುರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿಯನ್ನು ನೆರವೇರಿಸಿಕೊಟ್ಟರು. ಇದು ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಮತ್ತು ಭಾಷಾಜ್ಞಾನದ ಅಭಿವೃದ್ಧಿಗೆ ಉಪಯುಕ್ತವಾಗಿದೆ.

ಪ್ರಾಂಶುಪಾಲರಾದ ಡಾ. ಸುರೇಶ ವಿ ತನ್ನ ಅಧ್ಯಕ್ಷೀಯ ನೆಲೆಯಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ. ಯಶೋದಾ ರಾಮಚಂದ್ರ ಆಡಳಿತ ಮಂಡಳಿಯ ಈ ಕಾರ್ಯಕ್ರಮಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಸುರೇಶ ವಿ., ಡೀನ್ ಅಕಾಡೆಮಿಕ್ಸ್ ಡಾ. ಪ್ರಜ್ಞಾ ಎಂ.ಆರ್., ಕೆ.ವಿ.ಜಿ. ಅಮರಜ್ಯೋತಿ ಪಿ.ಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ, ಕೆ.ವಿ.ಜಿ. ಐ.ಪಿ.ಎಸ್. ಪ್ರಾಂಶುಪಾಲರಾದ ಶ್ರೀ ಅರುಣ್ ಕುಮಾರ್, ಕೆ.ವಿ.ಜಿ. ಐ.ಪಿ.ಎಸ್.ನ ಅಕಾಡೆಮಿಕ್ ಸಂಯೋಜಕಿ ಶ್ರೀಮತಿ ರೇಣುಕಾ ಉತ್ತಪ್ಪ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.